ನವದೆಹಲಿ: ಹೈದರಾಬಾದ್- ಬೆಂಗಳೂರು, ಚೆನ್ನೈ-ಮೈಸೂರು ವಯಾ ಬೆಂಗಳೂರು ಸೇರಿದಂತೆ ದೇಶದ 13 ಬುಲೆಟ್ ಟ್ರೈನ್ ಯೋಜನೆಗೆ ವಿಶ್ವಬ್ಯಾಂಕ್ ನೆರವು ನೀಡಲು ಮುಂದೆ ಬಂದಿದೆ.
ಜತೆಗೆ ಕೇಂದ್ರ ಸರ್ಕಾರ 2030ರ ಒಳಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ರೈಲು ಯೋಜನೆಯ ಅನುಷ್ಠಾನಕ್ಕೆ ವಿತ್ತೀಯ ನೆರವು ನೀಡಲು ಅದು ಮುಂದಾಗಿದೆ.
ಇದರ ಜತೆಗೆ ಸರಕು ಸಾಗಣೆಗೆಂದೇ ದೇಶಾದ್ಯಂತ 8 ಸಾವಿರ ಕಿಮೀ ವಿಶೇಷ ರೈಲು ಮಾರ್ಗ ರಚನೆಗೆ ಕೂಡ ಹಣಕಾಸು ನೆರವು ಅಗತ್ಯವಾಗಿದೆ. ಅದಕ್ಕಾಗಿ 40 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.
ಇದನ್ನೂ ಓದಿ:ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ
ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ರೈಲು ತಂತ್ರಜ್ಞಾನಗಳನ್ನು ಅಳವಡಿಸಲು ತನ್ನದೇ ಆದ ತಂತ್ರಜ್ಞರ ಮೂಲಕ ನೆರವು ನೀಡುವ ಬಗ್ಗೆ ಕೂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಅಧಿಕಾರಿಗಳಿಗೆ ನೀಡಿದ ಪ್ರಾತ್ಯಕ್ಷಿಕೆಯಲ್ಲಿ ಈ ಅಂಶ ವಿವರಿಸಲಾಗಿದೆ ಎಂದು “ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.