Advertisement

ಅಲಹಾಬಾದ್‌ ಬ್ಯಾಂಕ್‌ ಸಿಇಒ ವಜಾ?

06:00 AM May 15, 2018 | |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಉದ್ಯಮಿ ನೀರವ್‌ ಮೋದಿ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣ ಸಂಬಂಧ ಸಿಬಿಐ ಸೋಮವಾರ ಮೊದಲ ಆರೋಪಪಟ್ಟಿ ಸಲ್ಲಿಸಿದೆ. ಪಿಎನ್‌ಬಿ ಮಾಜಿ ಮುಖ್ಯಸ್ಥೆ ಉಷಾ ಅನಂತಸುಬ್ರಮಣಿಯನ್‌ ಹಾಗೂ ಬ್ಯಾಂಕ್‌ನ ಪ್ರಮುಖ ಅಧಿಕಾರಿಗಳ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ. ಈ ಹಿನ್ನೆಲೆಯಲ್ಲಿ ಉಷಾ ಅವರನ್ನು ಅಲಹಾಬಾದ್‌ ಬ್ಯಾಂಕ್‌ನ ಎಂಡಿ ಸ್ಥಾನ ಸೇರಿದಂತೆ ಎಲ್ಲ ಹುದ್ದೆಗಳಿಂದಲೂ ಕೆಳಗಿಳಿಸುವಂತೆ ಬ್ಯಾಂಕ್‌ಗೆ ಕೇಂದ್ರ ಹಣಕಾಸು ಸಚಿವಾಲಯ ನಿರ್ದೇಶನ ನೀಡಿದೆ.

Advertisement

ಪ್ರಸ್ತುತ ಉಷಾ ಅನಂತಸುಬ್ರಮಣಿಯನ್‌ ಅವರು ಅಲಹಾಬಾದ್‌ ಬ್ಯಾಂಕ್‌ ಸಿಇಒ ಹಾಗೂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷದ ಮೇ 5ರವರೆಗೆ ಅವರು ಪಿಎನ್‌ಬಿ ಎಂಡಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಡೈಮಂಡ್‌ ಆರ್‌, ಸೋಲಾರ್‌ ಎಕ್ಸ್‌ಪೋರ್ಟ್ಸ್ ಮತ್ತು ಸ್ಟೆಲ್ಲರ್‌ ಡೈಮಂಡ್ಸ್‌ಗೆ 6 ಸಾವಿರ ಕೋಟಿ ರೂ. ಮೊತ್ತದ ಲೆಟರ್ಸ್‌ ಆಫ್ ಅಂಡರ್‌ಟೇಕಿಂಗ್‌ ಅನ್ನು ಅಕ್ರಮವಾಗಿ ವಿತರಿಸಿರುವ ಆರೋಪಕ್ಕೆ ಸಂಬಂಧಿಸಿದ ಚಾರ್ಜ್‌ ಶೀಟ್‌ ಇದಾಗಿದೆ. ಇದರಲ್ಲಿ ಪಿಎನ್‌ಬಿಯ ಕಾರ್ಯಕಾರಿ ನಿರ್ದೇಶಕರಾದ ಕೆ.ವಿ. ಬ್ರಹ್ಮಾಜಿ ರಾವ್‌ ಮತ್ತು ಸಂಜೀವ್‌ ಶರಣ್‌ ಅವರ ಹೆಸರೂ ಇದ್ದು, ಇವರನ್ನು ಬ್ಯಾಂಕ್‌ನ ಮಂಡಳಿಯು ಸೋಮವಾರ ಎಲ್ಲ ಹಣಕಾಸಿನ ಮತ್ತು ಕಾರ್ಯಕಾರಿ ಅಧಿಕಾರದಿಂದ ಕೆಳಗಿಳಿಸಿದೆ. ಉಷಾ ಅವರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next