ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಉಂಟಾಗಿದ್ದ ಬಿಕ್ಕಟ್ಟು ಬಹುತೇಕ ಶಮನವಾಗಿದೆ ಎಂದು ಹೇಳಲಾಗಿದೆ.
ಹಣಕಾಸು ಖಾತೆ ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ನಾಯಕರು ಒಪ್ಪಿದ್ದು, ಅದರ ಜತೆಗೆ ಲೋಕೋಪಯೋಗಿ, ಸಹಕಾರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಗಳು ದೊರೆಯಲಿವೆ. ಕಾಂಗ್ರೆಸ್‌ಗೆ ಗೃಹ, ಜಲ ಸಂಪನ್ಮೂಲ,
ಕಂದಾಯ, ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್ ರಾಜ್ ಖಾತೆ ಸಿಗಲಿದೆ.
ಆದರೆ, ಎಚ್.ಡಿ.ದೇವೇಗೌಡರು ಹಣಕಾಸು ಜತೆಗೆ ನೀರಾವರಿ ಖಾತೆಯೂ ಜೆಡಿಎಸ್‌ಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ, ರಾಹುಲ್‌ಗಾಂಧಿಯವರು ವಿದೇಶದಿಂದ ಬಂದ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.