Advertisement

ಕಸದ ರಾಶಿಗಳಿಂದ ಕೊನೆಗೂ ಮುಕ್ತಿಗೊಂಡ ವೇಮಗಲ್‌

07:00 PM Feb 02, 2021 | Team Udayavani |

ಕೋಲಾರ: ಕಸ ವಿಲೇವಾರಿ ಮಾಡದೇ ಮೈಮರೆತಿದ್ದ ವೇಮಗಲ್‌ ಸ್ಥಳೀಯ ಆಡಳಿತವನ್ನು ಬಡಿದೆಚ್ಚರಿಸುವಲ್ಲಿ ಉದಯವಾಣಿ ವರದಿ ಸಹ ಕಾರಿಯಾ ಗಿದ್ದು, ಸ್ವತ್ಛತಾ ಕಾರ್ಯಕ್ಕೆ ಅಧಿಕಾರಿ ಸಿಬ್ಬಂದಿ ಕಾರ್ಯೋ ನ್ಮುಖರಾಗಿದ್ದಾರೆ. ವೇಮಗಲ್‌ನ ಕಸದ ಸಮಸ್ಯೆ ಬಗ್ಗೆ ಜ.31 ಭಾನುವಾರ ಉದಯವಾಣಿ ಪತ್ರಿಕೆಯಲ್ಲಿ “ಕಸದ ಕೊಂಪೆಯಂತಾದ ವೇಮಗಲ್‌ ಪಟ್ಟಣ”ಶೀರ್ಷಿಕೆಯಡಿ ವಿಸ್ತೃತವಾದ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ ಈಗ ವೇಮಗಲ್‌ನ ಸcತ್ಛತೆಗೆ ಮುಂದಾಗಿದೆ.

Advertisement

ಗ್ರಾಮ ಪಂಚಾಯ್ತಿ ಮುಂಭಾಗದ ಕಸದ ರಾಶಿಯಿಂದ ತುಂಬಿದ್ದ ಮಿನಿ ಕ್ರೀಡಾಂಗಣದ ಸುತ್ತಮುತ್ತಲೂ ಇಟ್ಟಾಡುತ್ತಿದ್ದ ಕಸವನ್ನು ಜೆಸಿಬಿ ಯಂತ್ರಗಳ ಬಳಸಿ ಸ್ವತ್ಛಗೊಳಿಸಲು ಮುಂದಾಗಿದೆ. ಕಸದ ಕೊಂಪೆಯಂತೆ ಕಾಣುತ್ತಿದ್ದ ವೇಮಗಲ್‌ ಅನ್ನು ಸ್ವತ್ಛವಾಗಿಸುವ ಕಾಳಜಿಯಿಂದ ಸುದ್ದಿ ಪ್ರಕಟಿಸಿದ್ದ ಉದಯ ವಾಣಿಯ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಚಿಕ್ಕಮಗಳೂರು ಕಾಫಿ ಮಂಡಳಿ ಕಚೇರಿ ಮುಚ್ಚಲು ಬೆಳೆಗಾರರ ವಿರೋಧ 

ಇನ್ನೂ ಮುಂದಾದರೂ ಕಸದ ಸಮಸ್ಯೆಯನ್ನು ತ್ವರಿತವಾಗಿ ಶಾಶ್ವತವಾಗಿ ಬಗೆಹರಿಸಿ ಪಟ್ಟಣ ಪಂಚಾಯ್ತಿ ಆಗುತ್ತಿರುವ ವೇಮಗಲ್‌ ಅನ್ನು ಸ್ವತ್ಛ ಪಟ್ಟಣವನ್ನಾಗಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next