Advertisement
412 ಸರಕಾರಿ ಕಾಲೇಜು, 500ಕ್ಕೂ ಅಧಿಕ ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಪದವಿಯ ಅಂತಿಮ ವರ್ಷದಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಬೆಂಗಳೂರು, ಮಂಗಳೂರು, ಮೈಸೂರು ಸಹಿತ ವಿವಿಧ ವಿವಿಗಳಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ರುವ ಸಾವಿರಾರು ವಿದ್ಯಾ ರ್ಥಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಜಿಕೆವಿಕೆ, ಪಶುವೈದ್ಯಕೀಯ ಮತ್ತು ಕೃಷಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳ ಅಂತಿಮ ವರ್ಷದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ, ಕ್ಯಾಂಪಸ್ ಸಂದರ್ಶನ ಮತ್ತು ಇಂಟರ್ನ್ಶಿಪ್‌ಗ್ಳಿಲ್ಲದೆ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.
ಸಾಮಾನ್ಯವಾಗಿ ಪದವಿ ಅಥವಾ ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯಾ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಇರುತ್ತದೆ. ವಿವಿಧ ಸಂಸ್ಥೆಗಳು ಕಾಲೇಜಿಗೆ ಹೋಗಿ ಸಂದರ್ಶನಗಳ ಮೂಲಕ ತಮಗೆ ಬೇಕಿರುವ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಬಹುತೇಕ ವಿದ್ಯಾರ್ಥಿಗಳು ಈ ಮೂಲಕ ಸುಲಭವಾಗಿ ಉದ್ಯೋಗ ಪಡೆದಿದ್ದಾರೆ. ಆದರೆ ಈ ವರ್ಷ ಫೆಬ್ರವರಿ, ಮಾರ್ಚ್ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆದಿಲ್ಲ. ಇನ್ನು ಮೇ ತಿಂಗಳಲ್ಲಿಯೂ ನಡೆಯುವ ಬಗ್ಗೆಯೂ ಖಾತರಿಯಿಲ್ಲ ಎಂದು ಸ್ನಾತಕೋತ್ತರ ವಿದ್ಯಾರ್ಥಿಯೋರ್ವರು ನೋವು ತೋಡಿಕೊಂಡರು.
Related Articles
ಸಾಮಾನ್ಯವಾಗಿ ತಾಂತ್ರಿಕ ಕೋರ್ಸ್ ಮತ್ತು ಕೆಲವು ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅಂತಿಮ ಸೆಮಿಸ್ಟರ್‌ನಲ್ಲಿ ಇಂಟರ್ನ್ಶಿಪ್ ಇರುತ್ತದೆ. ಕೌಶಲಾಭಿವೃದ್ಧಿಗೆ ಪೂರಕವಾದ ಪರಿಕಲ್ಪನೆ ಇದಾಗಿದ್ದು, ಇಲ್ಲಿ ಸಂಸ್ಥೆಗಳಿಗೆ ಹೋಗಿ ಪ್ರಾಯೋಗಿಕ ಅಧ್ಯಯನ ಹೆಚ್ಚಿರುತ್ತದೆ. ಆದರೆ ಈ ವರ್ಷ ಕೋವಿಡ್ 19 ಆತಂಕ ಲಕ್ಷಾಂತರ ವಿದ್ಯಾರ್ಥಿಗಳ ಇಂಟರ್ನ್ಶಿಪ್‌ಗ್ೂ ಅಡ್ಡಿಪಡಿಸಿದೆ ಎಂದು ವಿವಿಗಳ ಪ್ರಾಧ್ಯಾಪಕರೇ ಹೇಳುತ್ತಿದ್ದಾರೆ.
Advertisement
ನಿರುದ್ಯೋಗ ಭೀತಿಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿಸಿ ಔದ್ಯೋಗಿಕ ರಂಗಕ್ಕೆ ಪ್ರವೇಶಿಸುತ್ತಾರೆ. ಅನೇಕ ಸಂಸ್ಥೆಗಳು ಸಂದರ್ಶನ ಮತ್ತು ವಿವಿಧ ಆಯ್ಕೆ ವಿಧಾನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತವೆ. ಆದರೆ ಈ ವರ್ಷ ನೇಮಕಾತಿ ಪ್ರಕ್ರಿಯೆ ಹಿಂದಿನ ಸಾಲಿನಂತೆ ನಡೆಯಲು ಸಾಧ್ಯವಿಲ್ಲ. ಆರ್ಥಿಕ ಹಿಂಜರಿಕೆ ಒಂದೆಡೆಯಾದರೆ ಬಹುತೇಕ ಸಂಸ್ಥೆಗಳು ನೇಮಕಾತಿ ನಿಲ್ಲಿಸಿವೆ. ಹೀಗಾಗಿ ಹೊಸದಾಗಿ ಪದವಿ ಪೂರೈಸುವ ಲಕ್ಷಾಂತರ ಅಭ್ಯರ್ಥಿಗಳು ಪರಿಣಾಮ ಎದುರಿ ಸಲಿದ್ದಾರೆ ಎಂದು ಶಿಕ್ಷಣ ತಜ್ಞರೊಬ್ಬರು ಆತಂಕ ವ್ಯಕ್ತಪಡಿಸಿದರು. ಆನ್‌ಲೈನ್ ತರಗತಿ
ಕೆಲವೊಂದು ವಿಶ್ವ ವಿದ್ಯಾನಿಲಯಗಳು ಆನ್‌ಲೈನ್ ತರಗತಿ ಆರಂಭಿಸಿವೆ. ಈ ಮೂಲಕ ಪಠ್ಯಕ್ರಮ ಪೂರೈಸಿಕೊಳ್ಳಲು ಮುಂದಾಗಿವೆ. ಇದರಿಂದ ರಜಾ ಅವಧಿ ಮುಗಿದ ಪರಿಸ್ಥಿತಿ ಸುಧಾರಿಸಿದ ತತ್‌ಕ್ಷಣವೇ ಪರೀಕ್ಷೆ ನಡೆಸಲು ಅನುಕೂಲ ಆಗಲಿದೆ. ಆದರೆ ವಿದ್ಯಾರ್ಥಿಗಳ ಔದ್ಯೋಗಿಕ ಭವಿಷ್ಯ ಮಾತ್ರ ಇನ್ನಷ್ಟು ಚಿಂತಾಜನಕವಾಗಿರಲಿದೆ ಎಂದು ಹೇಳಲಾಗುತ್ತಿದೆ.