Advertisement

ಅಂತಿಮ ಮತದಾರರ ಪಟ್ಟಿ ಪ್ರಕಟ

06:03 PM Sep 05, 2020 | Suhan S |

ಯಾದಗಿರಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 2020ರ ಆ.28ರಂತೆ ಗ್ರಾಪಂ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಅಂತಿಮ ಮತದಾರ ಪಟ್ಟಿ ತಯಾರಿಸಿ ಆ.31ರಂದು ಪ್ರಚಾರ ಪಡಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ. ಆರ್‌ ತಿಳಿಸಿದ್ದಾರೆ.

Advertisement

ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸಹಾಯಕ ಆಯುಕ್ತರ ಕಾರ್ಯಲಯ, ಜಿಲ್ಲೆಯ ಎಲ್ಲ ತಹಶೀಲ್ದಾರ್‌ ಕಾರ್ಯಲಯ ಹಾಗೂ ತಾಪಂ ಹಾಗೂ ಸಂಬಂಧಪಟ್ಟ ಗ್ರಾಪಂ ಕಾರ್ಯಾಲಯಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪಟ್ಟಿಯನ್ನು ಪ್ರಚಾರ ಪಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 119 ಗ್ರಾಪಂಗಳಿದ್ದು, 935 ಮತಗಟ್ಟೆಗಳಲ್ಲಿ ಪುರುಷರು 3,76,555, ಮಹಿಳೆಯರು 3,74,749 ಇತರೆ 23 ಸೇರಿ ಒಟ್ಟು 7,51,327 ಮತದಾರರಿದ್ದಾರೆ.

ತಾಲೂಕುವಾರು ವಿವರ: ಶಹಾಪುರ ತಾಲೂಕಿನಲ್ಲಿ 24 ಗ್ರಾಪಂಗಳ ಒಟ್ಟು 193 ಮತಗಟ್ಟೆಗಳು ಇದ್ದು, ಪುರುಷರು 78,722, ಮಹಿಳೆಯರು 78,873, ಇತರೆ 1 ಸೇರಿ ಒಟ್ಟು 1,57,596 ಮತದಾರರಿದ್ದಾರೆ. ಯಾದಗಿರಿ ತಾಲೂಕಿನ 22 ಗ್ರಾಪಂಗಳ ಒಟ್ಟು 205 ಮತಗಟ್ಟೆಗಳಿದ್ದು, ಪುರುಷರು 78,393, ಮಹಿಳೆಯರು 79,159 ಇತರೆ 3 ಸೇರಿ ಒಟ್ಟು 1,57,555 ಮತದಾರರಿದ್ದಾರೆ. ಸುರಪುರ ತಾಲೂಕಿನ 21 ಗ್ರಾಪಂಗಳ ಒಟ್ಟು 150 ಮತಗಟ್ಟೆಗಳು ಇದ್ದು, ಪುರುಷರು 60,111, ಮಹಿಳೆಯರು 59,217 ಇತರೆ 4 ಸೇರಿ 1,19,332 ಒಟ್ಟು ಮತದಾರರಿದ್ದಾರೆ.

ಹುಣಸಗಿ ತಾಲೂಕಿನ 18 ಗ್ರಾಪಂಗಳ ಒಟ್ಟು 145 ಮತಗಟ್ಟೆಗಳಿದ್ದು ಪುರುಷರು 58,753, ಮಹಿಳೆಯರು 56,980 ಇತರೆ 11 ಸೇರಿ 1,15,744 ಮತದಾರರಿದ್ದಾರೆ. ಅಲ್ಲದೆ ವಡಗೇರಾ ತಾಲೂಕಿನ 17 ಗ್ರಾಪಂಗಳ ಒಟ್ಟು 116 ಮತಗಟ್ಟೆಗಳಿದ್ದು ಪುರುಷರು 47,775, ಮಹಿಳೆಯರು 47,214 ಇತರೆ 2 ಸೇರಿ 94,991 ಮತದಾರರಿದ್ದಾರೆ. ಗುರುಮಠಕಲ್‌ ತಾಲೂಕಿನ 17 ಗ್ರಾಪಂಗಳ ಒಟ್ಟು 126 ಮತಗಟ್ಟೆಗಳಿದ್ದು, ಪುರುಷರು 52,801, ಮಹಿಳೆಯರು 53,306 ಇತರೆ 2 ಸೇರಿ 1,06,109 ಒಟ್ಟು ಮತದಾರರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next