Advertisement

ಪ್ರಜಾತಂತ್ರದ ಸಂಭ್ರಮಕ್ಕೆ ಇಂದು ತೆರೆ

08:12 AM May 19, 2019 | mahesh |

ಹೊಸದಿಲ್ಲಿ: ದೇಶದುದ್ದಕ್ಕೂ ಸರಿಸುಮಾರು 38 ದಿನಗಳ ಕಾಲ ನಡೆದ ಪ್ರಜಾತಂತ್ರದ ಸಂಭ್ರಮಕ್ಕೆ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ. 7 ಹಂತಗಳನ್ನು ಕಂಡ ಪ್ರಸಕ್ತ ಲೋಕಸಭೆ ಚುನಾವಣೆಯ ಕೊನೆಯ ಮತ್ತು 7ನೇ ಹಂತದ ಮತದಾನವು ರವಿವಾರ ನಡೆಯಲಿದ್ದು, ಸಂಜೆ 7 ಗಂಟೆಯ ಹೊತ್ತಿಗೆ ಚುನಾವಣೆಯ ಅಬ್ಬರಕ್ಕೆ ಪೂರ್ಣವಿರಾಮ ಬೀಳಲಿದೆ.

Advertisement

ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ರವಿವಾರ ಮತದಾನ ನಡೆಯಲಿದ್ದು, ರಾಜಕೀಯವಾಗಿಯೂ ಈ ಹಂತ ಮಹತ್ವ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿರುವ ವಾರಾಣಸಿ ಕ್ಷೇತ್ರವೂ ಇದೇ ಹಂತದಲ್ಲಿ ಮತದಾನ ಎದುರಿಸಲಿದೆ. 918 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 10.01 ಕೋಟಿ ಮತದಾರರು ಇವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಉತ್ತರಪ್ರದೇಶದಲ್ಲಿ ಮೋದಿ ಮಾತ್ರವಲ್ಲದೆ, ಕೇಂದ್ರ ಸಚಿವ ಮನೋಜ್‌ ಸಿನ್ಹಾ, ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಅವರೂ ಮರು ಆಯ್ಕೆ ಬಯಸಿದ್ದಾರೆ. ಪಂಜಾಬ್‌ನಲ್ಲಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್‌ ಬಾದಲ್, ಕೇಂದ್ರ ಸಚಿವರಾದ ಹರ್‌ಸಿಮ್ರತ್‌ ಮತ್ತು ಹರ್ದೀಪ್‌ ಸಿಂಗ್‌, ಚಂಡೀಗಡದಲ್ಲಿ ಬಿಜೆಪಿ ಸಂಸದೆ ಕಿರಣ್‌ ಖೇರ್‌, ಕಾಂಗ್ರೆಸ್‌ ನಾಯಕ ಬನ್ಸಲ್ ಕಣದಲ್ಲಿದ್ದಾರೆ. ಬಿಹಾರದಲ್ಲಿ ಕೇಂದ್ರದ ನಾಲ್ವರು ಸಚಿವರ(ರವಿಶಂಕರ್‌ ಪ್ರಸಾದ್‌, ಆರ್‌.ಕೆ. ಸಿಂಗ್‌, ಅಶ್ವಿ‌ನಿ ಚೌಬೆ, ಕುಶ್ವಾಹಾ) ಹಣೆಬರಹ ನಿರ್ಧಾರವಾಗಲಿದೆ. ಜೊತೆಗೆ, ಗೋವಾ ಸಿಎಂ ಪರ್ರಿಕರ್‌ ನಿಧನದಿಂದ ತೆರವಾಗಿರುವ ಪಣಜಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಾಗೂ ತಮಿಳುನಾಡಿನ 4 ಕ್ಷೇತ್ರಗಳ ಉಪಚುನಾವಣೆಯೂ ರವಿವಾರವೇ ನಡೆಯಲಿದೆ.

ಹಿಂಸಾಚಾರ, ಆರೋಪ-ಪ್ರತ್ಯಾರೋಪ
38 ದಿನಗಳ ಕಾಲ ನಡೆದ ಪ್ರಜಾತಂತ್ರದ ಹಬ್ಬದಲ್ಲಿ ಹೈವೋಲೆrೕಜ್‌ ಪ್ರಚಾರಕ್ಕೆ ದೇಶವು ಸಾಕ್ಷಿಯಾಗಿದೆ. ಆಡಳಿತ, ವಿಪಕ್ಷಗಳ ನಾಯಕರ ನಡುವೆ ವಾಕ್ಸಮರ, ಆರೋಪ-ಪ್ರತ್ಯಾರೋಪಗಳು, ವಿವಾದಿತ ಹೇಳಿಕೆಗಳು, ಕ್ಷಮೆ ಯಾಚನೆ, ಚುನಾವಣಾ ಆಯೋಗದ ನೋಟಿಸ್‌, ಕೋರ್ಟ್‌ ಮೆಟ್ಟಿಲೇರಿದಂಥ ಘಟನೆಗಳೂ ನಡೆದಿವೆ. ಪ್ರಧಾನಿ ಮೋದಿ, ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಮತ್ತಿತರ ನಾಯಕರು ದಣಿವರಿಯದೆ ಪ್ರಚಾರ ರ್ಯಾಲಿ ನಡೆಸಿದ್ದಾರೆ. ಪಶ್ಚಿಮ ಬಂಗಾಲವಂತೂ ಎಲ್ಲ ಹಂತಗಳಲ್ಲೂ ಹಿಂಸಾಚಾರವನ್ನು ಕಂಡಿದೆ. ಬಂಗಾಲ ಹೊರತು ಪಡಿಸಿ ಇತರೆಡೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು, 6 ಹಂತಗಳಲ್ಲಿ ಸರಾಸರಿ ಶೇ.66.88 ಮತದಾನ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next