ಮುಂಬೈ: ಕೋವಿಡ್ ಕಾರಣದಿಂದ ಸಂಕಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಸಿನಿರಂಗವೂ ಒಂದು. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಕ್ಕೆ ಅಡ್ಡಿಯಾದರೆ, ನಂತರ ಚಿತ್ರಮಂದಿರ ಲಾಕ್ ಪರಿಸ್ಥಿತಿ. ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದರೂ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೆ ಸಿನಿರಂಗವೂ ಹಿನ್ನಡೆ ಅನುಭವಿಸಿದೆ.
ಕರ್ನಾಟಕದಲ್ಲಿ ಅ.1ರಿಂದ ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡಿದ ಕಾರಣ ಇನ್ನೆರಡು ವಾರದಲ್ಲಿ ಕನ್ನಡದ ಸ್ಟಾರ್ ಚಿತ್ರಗಳ ಭರಾಟೆ ಆರಂಭವಾಗಬಹುದು. ಕೋಟಿಗೊಬ್ಬ 3, ಬಜರಂಗಿ 2, ಸಲಗ ಚಿತ್ರಗಳು ಮೊದಲು ರಿಲೀಸ್ ಕಾಣಬಹುದು.
ಮಹಾರಾಷ್ಟ್ರದಲ್ಲೂ ಚಿತ್ರಮಂದಿರಗಳ ಓಪನ್ ಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅ.22ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿರುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಕೋವಿಡ್ ನಡುವೆ ಸಾಕಷ್ಟು ಚಿತ್ರಗಳು ಓಟಿಟಿ ರಿಲೀಸ್ ಕಂಡಿವೆ. ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್, ಸಿದ್ದಾರ್ಥ್ ಮಲ್ಹೋತ್ರಾರ ಶೇರ್ ಶಾ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇದೀಗ ಚಿತ್ರಮಂದಿರ ತೆರೆಯಲು ಅವಕಾಶ ನೀಡಿದ ಕಾರಣ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿದೆ.
ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳು
ಸೂರ್ಯವಂಶಿ
ಶಂಶೇರಾ
ಸತ್ಯಮೇವ ಜಯತೇ 2
ಪೃಥ್ವಿರಾಜ್
ಲಾಲ್ ಸಿಂಗ್ ಚಡ್ಡಾ
ಆರ್ ಆರ್ ಆರ್
ಬಚ್ಚನ್ ಪಾಂಡೆ
ಜರ್ಸಿ
83 ದಿ ಫಿಲ್ಮ್
ಜಯೇಶ್ ಭಾಯ್ ಜೋರ್ದಾರ್