ಚೆನ್ನೈ: ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ಅವರನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಬಂಧಿಸಿದೆ.
ಇತ್ತೀಚೆಗಷ್ಟೇ ಆಡಳಿತಾರೂಢ ಡಿಎಂಕೆ ಪಕ್ಷದಿಂದ ಉಚ್ಛಾಟಿತರಾಗಿರುವ ಸಾದಿಕ್, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ವ್ಯಾಪಿಸಿರುವ ಡ್ರಗ್ಸ್ ಜಾಲದ ಮಾಸ್ಟರ್‌ಮೈಂಡ್ ಆಗಿದ್ದ ಎಂದು ಆರೋಪಿಸಲಾಗಿದೆ.
ಕಳೆದೆರಡು ವಾರಗಳಿಂದ ತಲೆಮರೆಸಿಕೊಂಡಿದ್ದ ಸಾಧಿಕ್ ನನ್ನು ದೆಹಲಿ ಪೊಲೀಸರು ಹಾಗೂ ಎನ್‌ಸಿಬಿ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜೈಪುರದಿಂದ ಬಂಧಿಸಿ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿದೆ.
ಫೆಬ್ರವರಿ 24 ರಂದು ಎನ್ ಸಿಬಿ ಹೊರಡಿಸಿದ ಹೇಳಿಕೆಯಲ್ಲಿ ಈ ಜಾಲವು ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಮಲೇಷ್ಯಾದಲ್ಲಿ ಹರಡಿತ್ತು. ಹೆಲ್ತ್ ಮಿಕ್ಸ್ ಪೌಡರ್, ಒಣ ಕೊಬ್ಬರಿ ಮುಂತಾದ ಆಹಾರ ಉತ್ಪನ್ನಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟು ವಾಯು ಮತ್ತು ಸಮುದ್ರ ಸರಕುಗಳ ಮೂಲಕ ಸಾಗಾಟ ನಡೆಸಲಾಗುತ್ತಿತ್ತು ಎಂದು ಹೇಳಿದೆ.
ಇದನ್ನೂ ಓದಿ: Bhopal: ರಾಜ್ಯ ಸಚಿವಾಲಯದ ಕಟ್ಟಡದಲ್ಲಿ ಅಗ್ನಿ ಅವಘಡ… ಅಗ್ನಿಶಾಮಕ ವಾಹನ ದೌಡು