ಕೋವಿಡ್ ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು, ಮಲ್ಟಿಫ್ಲೆಕ್ಸ್‌ಗಳು ಸಂಪೂರ್ಣ ಬಂದ್ ಆಗಿವೆ. ಇನ್ನು ಈ ಸಮಯದಲ್ಲಿ ಮನರಂಜನೆ ಬಯಸುವ ಮಂದಿ, ಸಹಜವಾಗಿಯೇ ಟಿ.ವಿ ಮತ್ತು ಆನ್‌ಲೈನ್‌ನತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ನಿಧಾನವಾಗಿ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇಲ್ಲಿಯವರೆಗೆ ಕನ್ನಡ ಸಿನಿಮಾಗಳ ಬಿಡುಗಡೆಗೆ ಓಟಿಟಿ ಫ್ಲಾಟ್‌ಫಾರ್ಮ್ಗಳನ್ನು ಗಂಭೀರವಾಗಿ ಪರಿಗಣಿಸದ ಕನ್ನಡದ ನಿರ್ಮಾಪಕರು, ನಿರ್ದೇಶಕರು ಕೂಡ ಈಗ ಇಂಥ ಓಟಿಟಿ ಯಲ್ಲಿ ತಮ್ಮ ಸಿನಿಮಾಗಳ ರಿಲೀಸ್ ಬಗ್ಗೆ ಚಿತ್ತ ಹರಿಸುತ್ತಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೆ ಸರಿಯಾದ ಓಟಿಟಿ ಫ್ಲಾಟ್‌ಫಾರ್ಮ್ ಗಳು ಸಿಗುತ್ತಿಲ್ಲ. ಅಮೇಜಾನ್, ನೆಟ್‌ಫ್ಲೆಕ್ಸ್ ನಂತಹ ಬಹುರಾಷ್ಟ್ರೀಯ ಓಟಿಟಿ ಫ್ಲಾಟ್‌ಫಾರ್ಮ್ಗಳು ಕನ್ನಡದಂಥ ಪ್ರಾದೇಶಿಕ ಭಾಷೆಗಳ ಚಿತ್ರಗಳ ಬಿಡುಗಡೆಯ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲ, ಕನ್ನಡ ಸಿನಿಮಾಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಮಾತುಗಳೂ ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಇದೇ ವೇಳೆ ಕನ್ನಡ ಸಿನಿಮಾಗಳು, ವೆಬ್ ಸೀರಿಸ್, ಶಾರ್ಟ್ ಫಿಲಂಗಳ ಬಿಡುಗಡೆಗಾಗಿಯೇ “ಫಿಲಂ ಶಾಪ್’ ಎನ್ನುವ ಹೆಸರಿನಲ್ಲಿ ಪ್ರತ್ಯೇಕ ಓಟಿಟಿ ಫ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಕನ್ನಡದ ಹಿರಿಯ ನಿರ್ಮಾಪಕ ಮತ್ತು ನಿರ್ದೇಶಕ ಬಿ.ಆರ್ ಕೇಶವ್ ಮುಂದಾಗಿದ್ದಾರೆ.
ಕನ್ನಡದಲ್ಲಿ ಇಲ್ಲಿಯವರೆಗೆ ಸುಮಾರು 25 ಚಿತ್ರಗಳ ನಿರ್ಮಾಣ, 54 ಸಿನಿಮಾಗಳ ನಿರ್ದೇಶನ ಮಾಡಿರುವ ಬಿ.ಆರ್.ಕೇಶವ್, ಈಗ “ಲಂ ಶಾಪ್’ ಓಟಿಟಿ ಮೂಲಕ ಕನ್ನಡ ದೃಶ್ಯರೂಪಕಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ.