Advertisement

ಒಂದೂವರೆ ವರ್ಷದ ಹಿಂದೆ ಆತ್ಮಹತ್ಯೆಗೆ ಮುಂದಾಗಿದ್ದ ಚಿತ್ರ ನಿರ್ಮಾಪಕ ಸಾವು

09:44 AM Jun 27, 2019 | Team Udayavani |

ಉಡುಪಿ: ಸುಮಾರು ಒಂದೂವರೆ ವರ್ಷದ ಹಿಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ, ಬಳಿಕ ಸಮಾಜಸೇವಕರಿಂದ ರಕ್ಷಿಸಲ್ಪಟ್ಟು ಕಟಪಾಡಿಯ ಆಶ್ರಮದಲ್ಲಿ ನೆಲೆಸಿದ್ದ ಕನ್ನಡ ಚಿತ್ರ ನಿರ್ಮಾಪಕ, ಉದ್ಯಮಿ ಮಾಲೂರಿನ ಎಂ. ಆರ್‌. ಕೃಷ್ಣಪ್ಪ (90) ಅವರು ಮಂಗಳ ವಾರ ಅಜ್ಜರಕಾಡಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕೃಷ್ಣಪ್ಪ ಅವರನ್ನು ಆಶ್ರಮದ ಉಸ್ತುವಾರಿ ಗಳ ವಿನಂತಿ ಮೇರೆಗೆ ಉಡುಪಿಯ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್‌ ಮೇಸ್ತ ಶಿರೂರು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

ಸುಮಾರು ಒಂದೂವರೆ ವರ್ಷಗಳ ಹಿಂದೆ ಕೃಷ್ಣಪ್ಪ ಅವರು ಜೀವನದಲ್ಲಿ ಜುಗುಪ್ಸೆಯಿಂದ ಮಲ್ಪೆಯ ಕಡಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅನಂತರ ಅವರನ್ನು ಸಮಾಜಸೇವಕರು 2017 ನ. 24ರಂದು ಕಟಪಾಡಿಯಲ್ಲಿ ನಿರ್ಗತಿಕರ ಸೇವೆ ಮಾಡುತ್ತಿರುವ ಕುಮಾರ್‌ ಅವರ ಕಾರುಣ್ಯ ಅನಾಥಾಶ್ರಮಕ್ಕೆ ಸೇರಿಸಿದ್ದರು.

ಕೃಷ್ಣಪ್ಪ ಅವರು ಹಲವು ಕನ್ನಡ ಸಿನೆಮಾಗಳ ನಿರ್ಮಾಣದಲ್ಲಿ ಪಾಲುದಾರರಾಗಿದ್ದರು. 1977ರಲ್ಲಿ “ಗೆದ್ದವಳು ನಾನೇ’ ಚಿತ್ರ ನಿರ್ಮಿಸಿದ್ದರು. ಅದರಲ್ಲಿ ಅಶೋಕ್‌ ಮತ್ತು ಶ್ರೀವಿದ್ಯಾ ಅವರು ನಾಯಕ – ನಾಯಕಿ ಯಾಗಿದ್ದರು. ಈ ಚಿತ್ರವನ್ನು ಆರೂರು ಪಟ್ಟಾಭಿ ನಿರ್ದೇಶಿಸಿದ್ದರು. ಚಿತ್ರಕ್ಕೆ ಎಂ. ರಂಗರಾವ್‌ ಸಂಗೀತ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next