Advertisement

ಎರಡು ಪಾತ್ರಗಳ ಚಿತ್ರ –ವಿಭಿನ್ನ ಪ್ರಯೋಗದ ಸಿ3

09:00 PM Dec 11, 2017 | Team Udayavani |

ಕನ್ನಡದಲ್ಲಿ ಈಗಂತೂ ಪ್ರಯೋಗಾತ್ಮಕ ಚಿತ್ರಗಳದ್ದೇ ಸುದ್ದಿ. ಬಹುತೇಕ ಹೊಸಬರು ಹೊಸ ರೀತಿಯ ಕಥೆ ಹಿಡಿದು ಗಾಂಧಿನಗರಕ್ಕೆ ಬರುತ್ತಿದ್ದಾರೆ. ಅಂತಹ ಚಿತ್ರಗಳ ಸಾಲಿಗೆ “ಸಿ3′ ಚಿತ್ರ ಹೊಸ ಸೇರ್ಪಡೆ. ಈ ಚಿತ್ರದ ವಿಶೇಷವೆಂದರೆ,  ಈ ಚಿತ್ರದಲ್ಲಿ ನಾಯಕ ನಾಯಕಿ ಬಿಟ್ಟರೆ ಬೇರೆ ಯಾವುದೇ ಪಾತ್ರಗಳಿಲ್ಲ! ಇಡೀ ಚಿತ್ರದ ಕಥೆ ನಡೆಯುವುದು ಒಂದೇ ರಾತ್ರಿ ಹಾಗೂ ಒಂದೇ ತಾಣದಲ್ಲಿ.

Advertisement

ಕಿರುತೆರೆಯ “ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ವಿಜಯಕುಮಾರ್‌ ಹಾಗೂ “ಪ್ಯಾಟೆ ಹುಡ್ಗಿರ ಹಳ್ಳಿ ಲೈಫ್’ ರಿಯಾಲಿಟಿ ಶೋ ಖ್ಯಾತಿಯ ಐಶ್ವರ್ಯ ಚಿತ್ರದ ಪ್ರಮುಖ ಆಕರ್ಷಣೆ. ಇವರಿಬ್ಬರ ಸುತ್ತವೇ “ಸಿ3′ ಸಿನಿಮಾ ಮೂಡಿಬಂದಿದೆ. ಕೃಷ್ಣಕುಮಾರ್‌ ಬಿ. ಹೊಂಗನೂರು ಎಂಬುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ “ಸಿ3′ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಡಿಟಿಎಸ್‌ ಹಂತದಲ್ಲಿದೆ.

ಇತ್ತೀಚೆಗಷ್ಟೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಗಣಪತಿ ಹೆಬ್ಟಾರ್‌ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಒಂದು ದಿನ ರಾತ್ರಿ ಕಚೇರಿಯಲ್ಲೇ ನಾಯಕ ಇರಬೇಕಾದ ಸಂದರ್ಭ ಒದಗಿ ಬರುತ್ತದೆ. ಆ ಸಂಧರ್ಭದಲ್ಲಿ ಕೆಲವು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಆ ವೇಳೆ ನಾಯಕ ಅಲ್ಲಿಂದ ಹೇಗೆ ಪಾರಾಗಿ ಹೊರ ಬರುತ್ತಾನೆ, ಕೊನೆಗೆ ಏನಾಗುತ್ತಾನೆ ಎಂಬುದೇ ಒನ್‌ಲೈನ್‌. ಕೆಂಗೇರಿ ಸಮೀಪದ ಸರ್ಕಾರಿ ಕಚೇರಿಯೊಂದರಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. 

ಹಾಗಾದರೆ, ಇಲ್ಲಿ “ಸಿ3′ ಅಂದರೇನು ಎಂಬುದಕ್ಕೆ ಸಿನಿಮಾ ಬರುವವರೆಗೂ ಕಾಯಲೇಬೆಕು. ಬಿ.ಎಂ. ಚೇತನ್‌ ಈ ಚಿತ್ರದ ನಿರ್ಮಾಪಕರು. ಆರ್‌.ಗಿರಿ ಕ್ಯಾಮೆರಾ ಹಿಡಿದಿದ್ದಾರೆ. ಆದಿಲ್‌ ನಾದಾಫ್ ಸಂಗೀತ ನೀಡಿದ್ದಾರೆ. ಶಿವಪ್ರಸಾದ್‌ ಯಾದವ್‌ ಅವರು ಸಂಕಲನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ. ಅಕುಲ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next