Advertisement

Film Censor: ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸಿಕ್ಕಿತು ಸೆನ್ಸಾರ್‌ ಪ್ರಮಾಣಪತ್ರ!

08:28 PM Oct 17, 2024 | Team Udayavani |

ಹೊಸದಿಲ್ಲಿ: ಚಿತ್ರದ ಆರಂಭದಿಂದಲೂ ಹಲವು ವಿವಾದಗಳಿಂದಲೇ ಸುದ್ದಿಯಾಗಿದ್ದ ಬಾಲಿವುಡ್ ನಟಿ, ಹಾಲಿ ಸಂಸದೆ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೇಂದ್ರಿಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ  ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ)ನಿಂದ  ಪ್ರದರ್ಶನಕ್ಕೆ ಗುರುವಾರ ಕೊನೆಗೂ ಅನುಮತಿ ದೊರೆತಿದೆ.

Advertisement

ಈ ಬಗ್ಗೆ ಎಕ್ಸ್‌ನಲ್ಲಿ ನಟಿ ಕಂಗನಾ ಪೋಸ್ಟ್ ಮಾಡಿ “ನಮ್ಮ ಚಿತ್ರ ಎಮರ್ಜೆನ್ಸಿಗೆ ಸೆನ್ಸಾರ್ ಪ್ರಮಾಣಪತ್ರ ಸ್ವೀಕರಿಸಿದ್ದೇವೆ ಎಂದು ತಿಳಿಸಲು ಸಂತಸವೆನಿಸಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸುತ್ತವೆ. ತಾಳ್ಮೆಯಿಂದ ಕಾದಿದ್ದಕ್ಕೆ, ಬೆಂಬಲಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್‌ ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್‌ ತಿಂಗಳಾಂತ್ಯ ಅಥವಾ ನವೆಂಬರ್‌ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರಮಾಣ ಪತ್ರ ಮಂಡಳಿಯು ಚಿತ್ರಕ್ಕೆ ಸುಮಾರು 13 ದೃಶ್ಯಗಳಿಗೆ ಕತ್ತರಿ ಹಾಗೂ ಬದಲಾವಣೆಗೆ ಸೂಚಿಸಿ ಯು/ಎ ಪ್ರಮಾಣಪತ್ರ ನೀಡಿತ್ತು. ಪರಿಷ್ಕರಣೆ ಸಮಿತಿಯು ಸೂಚಿಸಿದ  ಬದಲಾವಣೆಗಳ ಅನುಸರಿಸಿ ಚಿತ್ರ ಬಿಡುಗಡೆಗೆ ಪ್ರಮಾಣಪತ್ರ ಪಡೆಯಲು ನಿರ್ಮಾಪಕರಿಗೆ ತಿಳಿಸಿದೆ.  ಕೆಲವು ಹಿಂಸಾತ್ಮಕ ದೃಶ್ಯಗಳ ತೆಗೆದು ಹಾಕಲು ಸೂಚಿಸಿತ್ತು. ಸಂಭಾಷಣೆಯಲ್ಲಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ‘ಸಂತʼ ಎಂದು ಉಲ್ಲೇಖಿಸಲಾಗಿದೆ. ಈ ಚಿತ್ರವು ಸಿಖ್ ಸಮುದಾಯವನ್ನು ಕೆಟ್ಟದಾಗಿ ತೋರಿಸಿದೆ ಎಂದು ಆರೋಪಿಸಿ ಹಲವಾರು ಸಿಖ್ ಗುಂಪುಗಳು ಅನೇಕ ದೂರುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಎಮರ್ಜೆನ್ಸಿ’ ಚಿತ್ರದ ಟ್ರೇಲರ್ ವಿವಾದ
ತುರ್ತು ಪರಿಸ್ಥಿತಿಯ ಟ್ರೇಲರ್ ಬಿಡುಗಡೆಯಾದಾಗ ‘ಎಮರ್ಜೆನ್ಸಿ’ ಚಿತ್ರದ ವಿವಾದವು ಆರಂಭವಾಗಿ ಇದು ಖಲಿಸ್ತಾನ್ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಇಂದಿರಾ ಗಾಂಧಿಪಕ್ಷ ಬೆಂಬಲಿಸುವ ಭರವಸೆ ತೋರಿಸುತ್ತದೆ. ಇದರಿಂದ ಕುಪಿತಗೊಂಡ ದೆಹಲಿಯ ಶಿರೋಮಣಿ ಅಕಾಲಿದಳವು ಸಿಖ್ಖರ ಖಳನಾಯಕರಂತೆ ಚಿತ್ರಿಸಲಾಗಿದೆ ಎಂಬ ಕಾರಣದಿಂದ ಸಿನಿಮಾ ನಿಷೇಧಕ್ಕೆ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿತ್ತು.

ದಿವಂಗತ ರಾಜಕಾರಣಿ ಪಾತ್ರದಲ್ಲಿ ಕಂಗನಾ ನಟಿಸುವ ಜೊತೆಗೆ ಅವರೇ ಚಿತ್ರ ನಿರ್ಮಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ಜೈಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ಮಹಿಮಾ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

Advertisement

ಇಂದಿರಾ ಗಾಂಧಿ  ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳ ಪ್ರಮುಖ ವಿಷಯವಾಗಿಟ್ಟುಕೊಂಡು ‘ಎಮರ್ಜೆನ್ಸಿʼ ಸಿನಿಮಾ ಮಾಡಲಾಗಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ ಕಂಗನಾ ರಣಾವತ್​ ವೇಷಭೂಷಣ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆ ಆದ ಬಳಿಕವೂ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ. ಹಲವು ಕರಣಗಳಿಂದಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next