Advertisement

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

01:29 AM Jul 08, 2024 | Team Udayavani |

ಬೆಂಗಳೂರು: ಬಸವಳಿದಿರುವ ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್‌ ನೀಡುವ ನಿಟ್ಟಿನಲ್ಲಿ ಚಿತ್ರತಂಡವೊಂದು ಜಗತ್ತಿನಲ್ಲೇ ಮೊದಲು ಎನ್ನಬಹುದಾದ ಪ್ರಯೋಗಕ್ಕೆ ಮುಂದಾಗಿದೆ.
ಹೊಸಬರ ತಂಡ ರೂಪಿಸಿರುವ ನಾಕ್‌ಔಟ್‌ ಚಿತ್ರ ಜು. 19ರಂದು ಬಿಡುಗಡೆ ಕಾಣಲಿದ್ದು, ಇದನ್ನು ನೋಡಬೇಕಾದರೆ ಮೊದಲಿಗೇ ಟಿಕೆಟ್‌ ಖರೀದಿಸಬೇಕಿಲ್ಲ. ಮೊದಲಾರ್ಧವನ್ನು ಉಚಿತವಾಗಿ ನೋಡಬಹುದು. ಅನಂತರ ಸಿನೆಮಾ ಇಷ್ಟ ಆದರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಬಹುದು.

Advertisement

ಸೆಕೆಂಡ್‌ ಹಾಫ್ನಲ್ಲಿ ಚತ್ರಮಂದಿರಕ್ಕೆ ಮರುಪ್ರವೇಶಿಸಬೇಕಾದರೆ ಟಿಕೆಟ್‌ ತೋರಿಸಬೇಕು. ಅಂಬರೀಷ್‌ ಚಿತ್ರವನ್ನು ನಿರ್ದೇಶಿಸಿದರೆ, ಅಜಯ್‌ ಪೃಥ್ವಿ ಹಾಗೂ ರಚನಾ ಇಂದರ್‌ ನಾಯಕ-ನಾಯಕಿಯಾಗಿದ್ದಾರೆ.
ಈ ಕಾನ್ಸೆಪ್ಟ್ ಹಿಂದಿನ ಉದ್ದೇಶ ಸಿನಿಮಾದ ಗುಣಮಟ್ಟ ಖಾತ್ರಿಪಡಿಸುವುದು. ವಾರ ವಾರ ತೆರೆ ಕಾಣುವ ಬಹುತೇಕ ಸಿನೆಮಾಗಳು ತಮ್ಮ ಗುಣಮಟ್ಟದ ಕೊರತೆಯಿಂದ ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ. ಇದೇ ಕಾರಣದಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ “ನಾಟ್‌ ಔಟ್‌’ ತಂಡ ಹೀಗೊಂದು ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದೆ. ಇದು ಯಶಸ್ಸು ಕಾಣುವ ವಿಶ್ವಾಸ ತಂಡಕ್ಕಿದೆ.

ಸಿನೆಮಾದ ನಿರ್ಮಾಣ ಸುಲಭ ಆಗಿರುವ ಈ ಸಮಯದಲ್ಲಿ ಚಿತ್ರತಂಡಗಳಿಗೆ ಸವಾಲಾಗಿರುವುದು ಸಿನೆಮಾದ ಪ್ರಮೋಶನ್‌. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಪ್ರತಿ ತಂಡಗಳು ಹೊಸ ಹೊಸ ಐಡಿಯಾ ಮಾಡುತ್ತಿವೆ. ತೆರೆಕಂಡ ಸಿನೆಮಾಗಳು ಕೂಡಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣದೇ ಇರುವ ಈ ಹೊತ್ತಿನಲ್ಲಿ ಏನಾದರೂ ಒಂದು ಆಕರ್ಷಕವಾದ ಯೋಜನೆ ಮಾಡಲೇಬೇಕು ಎಂದು ಸಿನಿಮಾ ತಂಡ ಹೇಳುತ್ತದೆ.

“ಸಿನೆಮಾದ ಗುಣಮಟ್ಟವನ್ನು ಮೊದಲರ್ಧ ಸಿನೆಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ನೋಡಬಹುದು. ಅನಂತರ ಸೆಕೆಂಡ್‌ ಆಫ್‌ ಸಿನೆಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್‌ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಇರುತ್ತದೆ.”
– ಅಂಬರೀಷ್‌ ಎಂ, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next