ತನ್ನ 4ನೇ ವಯಸ್ಸಿನಲ್ಲಿ ಸಚಿನ್ ಬಸ್ರುರೂ ನಿರ್ದೇಶನದ “ಅಮ್ಮ’ ಆಲ್ಬಮ್ ಸಾಂಗ್‌ನಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಳು.ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರುರೂ ನಿರ್ದೇಶನದ “ಕಟಕ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಜನಪ್ರಿಯಳಾಗಿದ್ದಳು.
Advertisement
ಸಾಲಿಗ್ರಾಮದ ನಿವಾಸಿ ಕುಂದಾಪುರದ ಕೆ. ರಾಘವೇಂದ್ರ ಆಚಾರ್ ಮತ್ತು ಮಾಲಾ ದಂಪತಿಯ ಪುತ್ರಿಯಾದ ಈಕೆ 200ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾಳೆ. ಮೂಡುಬಿದಿರೆ ಯಲ್ಲಿ ನಡೆದ “ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನ’ ದಲ್ಲಿ “ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ’ ನೀಡಿ ಗೌರವಿಸ ಲಾಗಿದೆ. ಪ್ರಸ್ತುತ ಈಕೆ ತೆಕ್ಕಟ್ಟೆ ವಿಶ್ವ ವಿನಾಯಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಎಂದರು.