ಭೋಪಾಲ್ : ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರವು ಅದರ “ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದ ಹಲವಾರು ವಿವಾದಗಳ ಸುಳಿಯಲ್ಲಿ ಸಿಲುಕಿದ್ದು, ಇತ್ತೀಚಿನ ಬೆಳವಣಿಗೆಯಲ್ಲಿ, ಮಧ್ಯಪ್ರದೇಶದ ಉಲೇಮಾ ಮಂಡಳಿಯು ಅಸಮಾಧಾನ ವ್ಯಕ್ತಪಡಿಸಿ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದೆ.
ಚಿತ್ರದಲ್ಲಿನ ಅಶ್ಲೀಲತೆಯ ಕುರಿತು ಆಕ್ರೋಶ ಹೊರ ಹಾಕಿ ಚಿತ್ರಮಂದಿರಗಳಿಗೆ ಬರುವುದನ್ನು ನಿಲ್ಲಿಸಬೇಕು ಎಂದು ಮಂಡಳಿಯ ಅಧ್ಯಕ್ಷ ಸೈಯದ್ ಅನಸ್ ಅಲಿ ಹೇಳಿದ್ದಾರೆ.
ಚಿತ್ರದಲ್ಲಿನ ಅಸಭ್ಯತೆಯ ಬಗ್ಗೆ ತನಗೆ ಹಲವಾರು ಕರೆಗಳು ಮತ್ತು ದೂರುಗಳು ಬಂದಿವೆ ಎಂದು ಹೇಳಿದ ಸೈಯದ್ ಅನಾಸ್ ಅಲಿ, ಇಸ್ಲಾಂ ಧರ್ಮವನ್ನು ತಪ್ಪಾಗಿ ಪ್ರಚಾರ ಮಾಡಲಾಗಿದೆ ಎಂದು ಹೇಳಿದ್ದಾರೆ.
“ಶಾರುಖ್ ಖಾನ್ ನಾಯಕನಾಗಿ ಪಠಾಣ್ ಎಂಬ ಚಲನಚಿತ್ರವನ್ನು ನಿರ್ಮಿಸಲಾಗಿದೆ, ಜನರು ಅವರನ್ನು ನೋಡುತ್ತಾರೆ ಮತ್ತು ಇಷ್ಟಪಡುತ್ತಾರೆ, ಆದರೆ ನಮಗೆ ಕರೆಗಳು ಮತ್ತು ದೂರುಗಳು ಬಂದಿವೆ ಮತ್ತು ಈ ಚಿತ್ರದೊಳಗೆ ಹರಡಿರುವ ಅಶ್ಲೀಲತೆಯ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಾಗಿ ಪ್ರಚಾರ ಮಾಡಲಾಗಿದೆ ಎಂದು ಸೈಯದ್ ಅನಾಸ್ ಅಲಿಸ್ ಹೇಳಿದ್ದಾರೆ.
ಅಖಿಲ ಭಾರತ ಮುಸ್ಲಿಂ ಉತ್ಸವ ಸಮಿತಿಯು ಚಿತ್ರಕ್ಕೆ ಸಂಬಂಧಿಸಿದಂತೆ ನಿಲುವು ತಳೆದಿದೆ ಮತ್ತು ಚಲನಚಿತ್ರವನ್ನು ಬಹಿಷ್ಕರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಹಲವು ಹಿಂದೂ ಸಂಘಟನೆಗಳು ಹಾಡಿನ ಸಾಹಿತ್ಯ ಮತ್ತು ಧಿರಿಸಿನ ಕುರಿತು ವ್ಯಾಪಕ ಆಕ್ರೋಶ ಹೊರ ಹಾಕಿ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.