Advertisement

ಚಿತ್ರದುರ್ಗದಲ್ಲಿ ಅವಕಾಶ ಸಿಕ್ಕರೆ ಸ್ಪರ್ಧೆ: ಚಿತ್ರ ನಟಿ ಭಾವನಾ

09:41 AM Feb 04, 2018 | |

ಮಂಗಳೂರು: ನಾನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸ್ಪರ್ಧಾ ಕಾಂಕ್ಷಿ. ಅವಕಾಶ ಸಿಕ್ಕಿದರೆ ಖಂಡಿತ ಸ್ಪರ್ಧಿಸುತ್ತೇನೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಪ್ರಚಾರ ಸಮಿತಿ ಸದಸ್ಯರಾದ ನಟಿ ಭಾವನಾ ತಿಳಿಸಿದ್ದಾರೆ.

Advertisement

ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದ ಅವರು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಯನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರ ಅನುಸರಿಸುತ್ತಿದೆ ಎನ್ನಲಾದ ಜನ ವಿರೋಧಿ ನೀತಿಯನ್ನು ಪ್ರತಿಭಟಿಸಿ ನಗರದ ಜ್ಯೋತಿ ಜಂಕ್ಷನ್‌ನಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಏರ್ಪ ಡಿಸಿದ್ದ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು.

ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಾಕಾಂಕ್ಷಿಗಳು ಅನೇಕ ಮಂದಿ ಇದ್ದಾರೆ. ನನಗೆ ಪಕ್ಷದ ಉನ್ನತ ನಾಯಕರ ಆಶ್ವಾಸನೆಯ ಜತೆಗೆ ನೈತಿಕ ಬೆಂಬಲವೂ ಇದೆ. ನಾನು ಬೆಂಗಳೂರಿನಲ್ಲಿದ್ದರೂ ನನ್ನ ತಂದೆಯ ಊರು ಚಿತ್ರದುರ್ಗ. ಈಗ ಚಿತ್ರದುರ್ಗ ದಲ್ಲಿಯೇ ವಾಸ್ತವ್ಯವಿದ್ದೇನೆ ಎಂದವರು ವಿವರಿಸಿದರು.

ಗ್ರಾಮಾಂತರ ಪ್ರದೇಶ ಇಷ್ಟ 
ನನಗೆ ಬೆಂಗಳೂರು ನಗರದಲ್ಲಿ ಸ್ಪರ್ಧಿಸುವಂತೆ ಕೋರಿಕೆ ಬಂದಿದ್ದರೂ ಗ್ರಾಮಾಂತರ ಪ್ರದೇಶವನ್ನು ಇಷ್ಟಪಟ್ಟಿ ದ್ದೇನೆ. ಚಿತ್ರದುರ್ಗವು ಗ್ರಾಮಾಂತರ ಹಾಗೂ ಹಿಂದುಳಿದ ಪ್ರದೇಶವಾಗಿದೆ. ಆದ್ದರಿಂದ ಈ ಕ್ಷೇತ್ರವ‌ನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. ತಾಯಿಯ ಊರು ತೀರ್ಥಹಳ್ಳಿ, ಅಜ್ಜನ ಊರು ಉಡುಪಿ ವಡಭಾಂಡೇಶ್ವರ. ಹಾಗಾಗಿ ಕರಾವಳಿ ಪ್ರದೇಶದ ಜತೆಗೂ ನಂಟಿದೆ ಎಂದು ಭಾವನಾ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನರ ಒಲವು ಗಳಿಸಿದೆ. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡು ವಲ್ಲಿ ಸಿದ್ದ  ರಾಮ ಯ್ಯ ಅವರು ಯಶಸ್ವಿಯಾಗಿದ್ದಾರೆ. ರಾಜ್ಯ ಸರಕಾರದ ಸಾಧನೆಗಳನ್ನು ಮತ್ತು ಅಭಿವೃದ್ಧಿ ಯೋಜನೆ  ಗಳನ್ನು ಜನರಿಗೆ ತಲುಪಿಸು ವುದು ಕಾಂಗ್ರೆಸ್‌ ಕಾರ್ಯಕರ್ತರೆಲ್ಲರ ಜವಾಬ್ದಾರಿ ಯಾಗಿದೆ ಎಂದರು.

Advertisement

ಮಂಗಳೂರು ನಗರ ಹೀಗೇಕೆ?
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ನೋಟು ಅಮಾನ್ಯಿàಕರಣ ಮತ್ತು ಜಿಎಸ್‌ಟಿ ಜಾರಿಯಿಂದ ಇಡೀ ದೇಶದ ಜನರು ಸಾಕಷ್ಟು ತೊಂದರೆ ಗಳನ್ನು ಅನುಭವಿಸಿದ್ದಾರೆ. ಆದರೆ ಮಂಗಳೂರಿ ನಲ್ಲಿ ಈ ವಿಷಯ ಪ್ರಾಮುಖ್ಯ ಪಡೆಯುವುದೇ ಇಲ್ಲ. ಇಲ್ಲಿ ಈ ವಿಷಯ ಮುಚ್ಚಿ ಹೋದಂತಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಿಂದ ಧನಾತ್ಮಕ ಸುದ್ದಿಗಳೇ ಕಾಣುತ್ತಿಲ್ಲ, ಘರ್ಷಣೆ, ಸಾವು, ನೋವಿನ ಸುದ್ದಿಗಳೇ ವಿಜೃಂಭಿ ಸುತ್ತಿವೆ. ಸುಶಿಕ್ಷಿತರೇ ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಯ ಜನರು ಇದರ ಬಗ್ಗೆ ಮಾತನಾಡುತ್ತಿಲ್ಲವೇಕೆ ಎಂದು ಭಾವನಾ ಪ್ರಶ್ನಿಸಿದರು.

ಖಂಡನೆ
ಸುರತ್ಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿರ್ಮಾಣ ಹಂತದ ಲ್ಲಿರುವ ಇಂದಿರಾ ಕ್ಯಾಂಟೀನಿನ ಗೋಡೆ ಮೇಲಿದ್ದ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಶುಕ್ರವಾರ ರಾತ್ರಿ ಎಣ್ಣೆಮಡ್ಡಿ ಎರಚಿ ವಿರೂಪಗೊಳಿಸಿರುವುದನ್ನು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next