ಮಂಗಳೂರು: ಕೃಷಿ ಉತ್ಪನ್ನಗಳು, ಡ್ರೈಫ್ರುಟ್ಸ್ ಮತ್ತು ಸಿಹಿತಿಂಡಿಗಳ ಉತ್ಪಾದನೆಯಲ್ಲಿ ಖ್ಯಾತಿ ಪಡೆದ ಬೋಳಾಸ್ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕನ್ನಡದ ಹಿರಿಯ ನಟ ಅನಂತ್‌ನಾಗ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದರೊಂದಿಗೆ ರಾಜ್ಯಾದ್ಯಂತ 70ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಬೋಳಾಸ್ ಸಂಸ್ಥೆಯು ಸ್ಥಳೀಯ ಪಾಲುದಾರರೊಂದಿಗೆ ಅತ್ಯಂತ ನಿಕಟ ಮತ್ತು ಸದೃಢವಾದ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ವರ್ಚಸ್ಸಿನಿಂದ ಅಪಾರ ಅಭಿಮಾನಿಗಳನ್ನು ಹೊಂದಿ ರುವ ಅನಂತ್‌ನಾಗ್ ಅವರ ಸಹಭಾ ಗಿತ್ವವು ಬೋಳಾಸ್ ಸಂಸ್ಥೆಯ ಬದ್ಧತೆ, ವಿಶ್ವಾಸಾರ್ಹ ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಅವರ ಜನಪ್ರಿಯತೆಯು ಬೋಳಾಸ್ ಬ್ರ್ಯಾಂಡ್ ಮೌಲ್ಯವನ್ನು ಇನ್ನೂ ಹೆಚ್ಚಿನ ಎತ್ತರಕ್ಕೇರಿಸಲುಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಅನಂತ್‌ನಾಗ್ ಮಾತನಾಡಿ, ಬೋಳಾಸ್ ಸಂಸ್ಥೆಯು ಬಹಳ ವರ್ಷ ಗಳಿಂದ ನನಗೆ ಪರಿಚಿತ. ಸಂಸ್ಥೆಯ ರಾಯಭಾರಿಯಾಗಿ ಪರಂಪರೆ ಮತ್ತು ಗುಣಮಟ್ಟದ ಬಗೆಗೆ ನನಗಿರುವ ಆಸಕ್ತಿಯನ್ನು ಹಂಚಿಕೊಳ್ಳುವುದಕ್ಕೆ ಬಹಳ ಸಂತೋಷ ವಾಗುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕ ದಾಮೋದರ್ ಕಾಮತ್ ಮಾತನಾಡಿ, ಅನಂತ್‌ನಾಗ್ ಅವರ ಬದ್ಧತೆ, ಶ್ರೇಷ್ಠತೆ ಮತ್ತು ಜನರೊಂದಿಗಿನ ನಿಕಟ ಒಡನಾಟವು ಬೋಳಾಸ್ ಸಂಸ್ಥೆಯ ಮೌಲ್ಯಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಅವರ ಸಹಯೋಗದಿಂದ ಸಂಸ್ಥೆಯು ಹೊಸ ದಿಶೆಯತ್ತ ಸ್ಫೂರ್ತಿಯುತವಾಗಿ ಸಾಗುತ್ತದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಬೋಳಾಸ್ ಸಂಸ್ಥೆಯು ತನ್ನ ಮಳಿಗೆಗಳ ಮೂಲಕ ಮಾತ್ರವಲ್ಲದೆ ರಿಟೈಲ್‌ವುತ್ತು ಇ-ಕಾಮರ್ಸ್ ಮೂಲಕ 100ಕ್ಕೂ ಅಧಿಕ ಬಗೆಯ ಉತ್ಪನ್ನಗಳನ್ನು ಗ್ರಾಹಕರಿಗೆ ತಲಪಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಡಿಡಿಡಿ.ಚಿಟlಚs.ಜಿn
ವೆಬ್‌ಸೈಟ್ ನೋಡಬಹುದು.