ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕುರುವಳ್ಳಿಯ ವಾರ್ಡ್ ನಂ.14 ರ ಅವಲಕ್ಕಿ ಮಿಲ್ ಸಮೀಪದ ಕಸದ ತೊಟ್ಟಿಯಲ್ಲಿ ತ್ಯಾಜ್ಯ ವಸ್ತುಗಳು ತುಂಬಿ ತುಳುಕುತ್ತಿವೆ. ಆದರೂ ಇದರ ಬಗ್ಗೆ ಪಪಂ ಸದಸ್ಯರು ಗಮನ ವಹಿಸುತ್ತಿಲ್ಲ. ತ್ಯಾಜ್ಯದಿಂದ ಜನರಿಗೆ ರೋಗ ರುಜಿನ ಹರಡಿದರೆ ಯಾರು ಹೊಣೆ ಎಂದು ಅಲ್ಲಿನ ಜನತೆ ಪ್ರಶ್ನಿಸುತಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ತೊಟ್ಟಿಯಲ್ಲಿರುವ ತ್ಯಾಜ್ಯವನ್ನು ತೆಗೆಸಬೇಕಿದೆ.
ತುಂಗಾ ನದಿಗೆ ಸೇರುತ್ತಿದೆ ಶೌಚಾಲಯ ನೀರು
ವಾರ್ಡ್ ನಂ.14 ರ ಕುರುವಳ್ಳಿಯ ಅವಲಕ್ಕಿ ಮಿಲ್‌ನಿಂದ ತುಂಗಾ ನದಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯವೊಂದಿದ್ದು ಅದರ ಪೈಪ್ ಒಡೆದು ಅಲ್ಲಿನ ಮಲಿನ ನೀರು ತುಂಗಾ ನದಿಗೆ ಸೇರುತ್ತಿದೆ. ಆ ತುಂಗಾ ನದಿಯ ನೀರನ್ನು ಇಡೀ ತೀರ್ಥಹಳ್ಳಿಯ ಜನತೆಗೆ ಕುಡಿಯಲು ಕೊಡಲಾಗುತ್ತದೆ. ಇದರಿಂದಾಗಿ ರೋಗ ಹಬ್ಬುವುದರಲ್ಲಿ ಅನುಮಾನವೇ ಇಲ್ಲ. ಕೂಡಲೇ ಪಪಂ ಸದಸ್ಯರು ಸಾರ್ವಜನಿಕ ಶೌಚಾಲಯದಿಂದ ಪೈಪ್ ಒಡೆದು ಹೋಗುತ್ತಿರುವ ನೀರನ್ನು ತಡೆದು ಜನರ ಸುರಕ್ಷತೆ ಕಾಪಾಡಬೇಕಿದೆ.