ಮಂಡ್ಯ: ದಿನೇ ದಿನೆ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳಿಂದಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಬೆಡ್‌ಗಳು ಸಂಪೂರ್ಣಭರ್ತಿಯಾಗಿವೆ.ಜಿಲ್ಲೆಯ ಎಲ್ಲಾ ತಾಲೂಕು ಸರ್ಕಾರಿ ಆಸ್ಪತ್ರೆಗಳಬೆಡ್‌ಗಳು ಸಂಪೂರ್ಣವಾಗಿ ಭರ್ತಿಯಾಗಿವೆ.ನಗರದ ಮಿಮ್ಸ್ ನಲ್ಲಿ 377 ಬೆಡ್‌ಗಳಿವೆ.ಇದರಲ್ಲಿ 55 ಐಸಿಯು, 322 ವಾರ್ಡ್ ಗಳಲ್ಲಿವೆ. ಇವೆಲ್ಲವೂ ಭರ್ತಿ ಯಾಗಿವೆ.
ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ50 ಹಾಸಿಗೆಗಳಿದ್ದರೆ, ಪ್ರಾಥಮಿಕ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿತಲಾ 15 ಹಾಸಿಗೆ ಇದ್ದು, ಎಲ್ಲವೂಸೋಂಕಿತರಿಂದ ತುಂಬಿ ಹೋಗಿವೆ.ಗುಣಮುಖರಾಗುವ ಸಂಖ್ಯೆಕಡಿಮೆಯಾ ಗುತ್ತಿದ್ದು ಬೆಡ್‌ಗಳ ಸಮಸ್ಯೆಕಾಡುತ್ತಿದೆ. ಪ್ರಸ್ತುತ ಮಿಮ್ಸ್‌ನಲ್ಲಿ ಸೋಂಕಿತರಿಗೆ 4ಬೆಡ್ ಖಾಲಿ ಇವೆ. ಬೇರೆ ರೋಗಿಗಳ ವಾರ್ಡ್‌ನಲ್ಲಿ 18 ಹಾಸಿಗೆಖಾಲಿ ಇವೆ. ಐಸಿಯುನಲ್ಲಿ ಒಂದೂ ಬೆಡ್ ಖಾಲಿ ಇಲ್ಲ.
ಇಲ್ಲಿ ಅತಿಗಂಭೀರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಕೋವಿಡೇತರ ರೋಗಿಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಿಮ್ಸ್‌ನ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಅವರಿಗೆ ಚಿಕಿತ್ಸೆಮುಂದುವರಿಸಲಾಗಿದೆ. ಮೆಕಾನಿಕಲ್ ವೆಂಟಿಲೇಟರ್‌ನಲ್ಲಿಗಂಭೀರ ಸ್ಥಿತಿಯ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯವೆಂಟಿಲೇಟರ್(ಎನ್‌ಐವಿ)ಗಳಲ್ಲಿ 20 ಮಂದಿ ಚಿಕಿತ್ಸೆಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆನೀಡಲಾಗುತ್ತಿದೆ.
7 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ: 7 ಖಾಸಗಿ ಆಸ್ಪತ್ರೆ,ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬೆಳ್ಳೂರಿನಆದಿಚುಂಚನಗಿರಿ ಆಸ್ಪತ್ರೆ, ಸ್ಯಾಂಜೋಆಸ್ಪತ್ರೆ, ಭಾರತೀನಗರದ ಜಿ.ಮಾದೇಗೌಡಆಸ್ಪತ್ರೆ ಸೇರಿ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆನೀಡಲು ಸಿದ್ಧತೆ ನಡೆಯುತ್ತಿದೆ.ಕೋವಿಡ್ ಕೇರ್ ಸೆಂಟರ್‌ಗಳು ಭರ್ತಿ:ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ಗಳುಸೋಂಕಿತರಿಂದ ಭರ್ತಿಯಾಗು ತ್ತಿವೆ.ಇನ್ನು ತಾಲೂಕುಗಳಲ್ಲೂ ಕೋವಿಡ್ ಕೇರ್‌ಸೆಂಟರ್ ತೆರೆಯಲಾಗಿದೆ. ಅಲ್ಲಿ ಈಗಾಗಲೇಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
5051 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ 5091 ಸಕ್ರಿಯಪ್ರಕರಣಗಳಿವೆ. ಇದರಲ್ಲಿ ಸರ್ಕಾರಿ ಆಸ್ಪತ್ರೆ 604, ಖಾಸಗಿಆಸ್ಪತ್ರೆಗಳಲ್ಲಿ 194, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 988 ಹಾಗೂಮನೆಗಳಲ್ಲಿ 3405ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೌಕರ್ಯ: ಈ ಬಾರಿ ಕೊರೊನಾ ಸೋಂಕಿನ ಪ್ರಮಾಣಹೆಚ್ಚಾಗಿರುವುದರಿಂದ ನಿಯಂತ್ರಿಸಲು ಆರೋಗ್ಯ ಇಲಾಖೆ ಹಾಗೂಜಿಲ್ಲಾಡಳಿತ ಶ್ರಮ ವಹಿಸುತ್ತಿದ್ದರೂ , ನಿಯಂತ್ರಣಕ್ಕೆ ಬರುತ್ತಿಲ್ಲ.ಆಸ್ಪತ್ರೆಗಳಲ್ಲಿನ ಚಿಕಿತ್ಸೆ, ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ.
ಆಕ್ಸಿಜನ್‌ಬೆಡ್‌ಖಾಲಿ ಇಲ್ಲ
ಮಿಮ್ಸ್‌ನಲ್ಲಿ 377 ಬೆಡ್ ವ್ಯವಸ್ಥೆಮಾಡಲಾಗಿದೆ. ಅದರಲ್ಲಿ 303 ಆಕ್ಸಿಜನ್ ಬೆಡ್‌ಗಳಿದ್ದು ಎಲ್ಲವೂ ಭರ್ತಿಯಾಗಿವೆ. ಬೆಳ್ಳೂರಿನಆದಿಚುಂಚನಗಿರಿ ಆಸ್ಪತ್ರೆಯಲ್ಲಿ 48 ಆಕ್ಸಿಜನ್‌ಬೆಡ್, 28 ವೆಂಟಿಲೇಟ್‌ಗಳಿವೆ. ಎಲ್ಲವೂಭರ್ತಿಯಾಗಿವೆ. ಇನ್ನುಳಿದಂತೆ ಜಿಲ್ಲೆಯಯಾವ ಆಸ್ಪತ್ರೆಗಳಲ್ಲೂ ಆಕ್ಸಿಜನ್‌ಬೆಡ್‌ಗಳಿಲ್ಲ.
ಎಚ್.ಶಿವರಾಜು