Advertisement

ಕೆರೆ ತುಂಬಿಸಲು ಈಗಿನಿಂದಲೇ ಕಸರತ್ತು

05:24 PM Mar 27, 2022 | Team Udayavani |

ಸಿಂಧನೂರು: ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಮುನ್ನ ತಾಲೂಕಿನಲ್ಲಿ ಕುಡಿವ ನೀರಿನ ಅಭಾವ, ತಾಪತ್ರಯ ಪರಿಶೀಲಿಸಲು ಆಡಳಿತ ವರ್ಗ ಗಮನ ಹರಿಸಿದೆ.

Advertisement

ಶಾಸಕ ವೆಂಕಟರಾವ್‌ ನಾಡಗೌಡ ಅಧ್ಯಕ್ಷತೆಯಲ್ಲಿ ಭಾನುವಾರ ನಗರದ ತಾಪಂನಲ್ಲಿ ವಿಶೇಷ ಸಭೆಯನ್ನು ಕುಡಿಯವ ನೀರಿಗೆ ಸಂಬಂಧಿಸಿದ ನಿಗದಿಪಡಿಸಲಾಗಿದೆ.

ತಾಲೂಕು ವ್ಯಾಪ್ತಿಗೆ ಒಳಪಡುವ 3 ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸದ್ಯ ಸ್ಥಿತಿಗತಿಯನ್ನು ಆಲಿಸಲು ಸಭೆ ನಡೆಸಲಾಗುತ್ತಿದೆ. ಸಮಸ್ಯಾತ್ಮಕ ಹಳ್ಳಿ, ಕ್ಯಾಂಪ್‌ ಗಳನ್ನು ಗುರುತಿಸಿ ನೀರಿನ ಅಭಾವ ತಲೆದೋರುವ ಮುನ್ನವೇ ಮುನ್ನೆಚ್ಚರಿಕೆವಹಿಸಲು ಆಡಳಿತ ವರ್ಗ ಎಚ್ಚೆತ್ತುಕೊಂಡಿದೆ.

ತಾಲೂಕಿನಲ್ಲಿವೆ 146 ಕೆರೆ

ಕುಡಿಯುವ ನೀರು ಸಂಗ್ರಹಕ್ಕಾಗಿ ತಾಲೂಕಿನಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಯಡಿ ಕೆರೆಗಳನ್ನು ನಿರ್ಮಿಸಲಾಗಿದೆ. ಬರೋಬ್ಬರಿ ಬೇಸಿಗೆ ಮುನ್ನವೇ 140 ಕೆರೆಗಳಲ್ಲಿ ನೀರು ಭರ್ತಿ ಮಾಡಿದರೆ, ಯಾವುದೇ ಅಭಾವ ಉಂಟಾಗುವುದಿಲ್ಲ.

Advertisement

ಬೋರ್‌ವೆಲ್‌ ಆಶ್ರಯಿಸಿರುವ ಉಮಲೂಟಿ, ರಾಗಲಪರ್ವಿ ಸೇರಿ ಇತರೆ ಗ್ರಾಮಗಳಲ್ಲಿ ಹಾಹಾಕಾರ ಉಂಟಾಗುತ್ತದೆ. ಕೆರೆಗಳನ್ನು ಭರ್ತಿ ಮಾಡಿದರೆ, ಅಲ್ಲಿನ ಜನರು ನಿರಾಳರಾಗುತ್ತಾರೆ. ರಾಮಾ ಕ್ಯಾಂಪಿನಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಇದೀಗ ಕೆರೆ ಹೂಳೆತ್ತಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಎಲ್ಲ ಗ್ರಾಮಗಳಲ್ಲಿ ಕೆರೆಗೆ ನೀರು ತುಂಬಿಸಲು ಆಡಳಿತ ವರ್ಗ ಗಮನ ಹರಿಸಬೇಕಿದೆ.

2ನೇ ಬೆಳೆಗೆ ನೀರು ವರದಾನ

ತುಂಗಭದ್ರಾ ಎಡದಂಡೆಯ ಆರಂಭಿಕ ಪಾಯಿಂಟ್‌ನಲ್ಲಿ ಕಾಲುವೆ ಒಡ್ಡು ಕುಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ಕೆಲವು ದಿನಗಳ ಕಾಲ ನೀರಿನ ಹರಿವು ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಅನುಭವಿಸಬೇಕಾಯಿತು. ಈವರೆಗೂ ಕೊನೆ ಭಾಗಕ್ಕೆ ನೀರು ಕಳುಹಿಸಲು ಹಾಗೂ ಕಾಲುವೆಯ ಗೇಜ್‌ ಕಾಪಾಡಲು ಅಧಿಕಾರಿಗಳು ಹೋರಾಟ ನಡೆಸಿದ್ದಾರೆ. ಬೆಳೆ ಉಳಿಸುವುದರ ಜೊತೆಗೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ತಾಲೂಕಿನಲ್ಲಿ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕಿದೆ. ಆದರೆ, 2ನೇ ಬೆಳೆಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸುತ್ತಿರುವುದರಿಂದ ಅಧಿಕಾರಿಗಳು ನಿರಾಳವಾಗಿದ್ದು, ಮೈ ಮರೆಯದಂತೆ ಎಚ್ಚರಿಸಲು ಮಾ.27ರಂದು ಸಭೆ ಕರೆಯಲಾಗಿದೆ.

ನಮ್ಮ ಭಾಗದಲ್ಲಿ ಯಾವುದೇ ನೀರಿನ ಸಮಸ್ಯೆಯಿಲ್ಲ. ಕಾಲುವೆಯ ಟೇಲೆಂಡ್‌ ಭಾಗದಲ್ಲಿ ಕೆರೆ ತುಂಬಿಸಬೇಕಿದ್ದು, ನೀರಾವರಿ ಇಲಾಖೆಯ ಸಹಕಾರ ಅಗತ್ಯವಾಗಿದೆ. ಪೊಲೀಸರು ಕೂಡ ಭದ್ರತೆ ಒದಗಿಸಬೇಕು. -ಹೆಸರು ಹೇಳಲಿಚ್ಚಿಸದ ಗ್ರಾಪಂ ಪಿಡಿಒ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next