ಬರುತ್ತಿರುವ ಹಿನ್ನೀರನ್ನು ಗುರುವಾರ ಬೆಳಗ್ಗೆಯಿಂದ ಜಲಾಶಯದ ಮುಖ್ಯ ಕ್ರಸ್ಟ್‌ಗೇಟ್‌ಗಳಿಂದ ಹಾಗೂ
ಜಲ ವಿದ್ಯುತ್ ಸ್ಥಾವರ ಮೂಲಕ 21 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಕಳದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು,ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೆಚ್ಚುವರಿ ಬರುತ್ತಿರುವ
ನೀರನ್ನು ಇಲ್ಲಿನ ಬಸವಸಾಗರಕ್ಕೆ ಹರಿಬಿಟ್ಟಿದ್ದರಿಂದ ಜಲಾಶಯದ ಗರಿಷ್ಠ ಮಟ್ಟವಾದ 492.23 ಮೀಟರ್ ನಷ್ಟು ತಲಪುವ ಮೂಲಕ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿಯಾಗಿ
ಜಲಾಶಯಕ್ಕೆ ಹರಿದು ಬರುತ್ತಿರುವ ಹಿನ್ನೀರನ್ನು ಅಣೆಕಟ್ಟಿನ 3 ಮುಖ್ಯ ಕ್ರಸ್ಟಗೇಟ್ ಮೇಲೆತ್ತುವ
ಮೂಲಕ 15 ಸಾವಿರ ಕ್ಯೂಸೆಕ್ ಹಾಗೂ ಜಲಾಶಯಕ್ಕೆ ಹೊಂದಿಕೊಂಡಿರುವ ಮುರಡೇಶ್ವರ ಜಲ ವಿದ್ಯುತ್ ಸ್ಥಾವರ ಮೂಲಕ 6 ಸಾವಿರ ಕ್ಯೂಸೆಕ್‌ನಷ್ಟು ಒಟ್ಟಾರೆ 21 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗಿದೆ ಎಂದು ಅಣೆಕಟ್ಟು ಉಪವಿಭಾಗದ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.
ಸಂಗ್ರವಿದೆ. ಒಳಹರಿವು 30 ಸಾವಿರ ಕ್ಯೂಸೆಕ್ ಇದೆ. ಒಂದೊಮ್ಮೆ ಜಲಾಶಯಕ್ಕೆ ನೀರಿನ ಒಳಹರಿವು
ಸ್ಥಗಿತಗೊಂಡರೆ ನದಿ ಪಾತ್ರಕ್ಕೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಒಟ್ಟು ಹೊರಹರಿವು ಕ್ರಸ್ಟ್‌ಗೇಟ್ ಹಾಗೂ ಜಲ ವಿದ್ಯುತ್ ಸ್ಥಾವರ ಮೂಲಕ 21 ಸಾವಿರ ಕ್ಯೂಸೆಕ್
ಇದ್ದು ಹಾಗೂ ಕೃಷ್ಣಾ ಅಚ್ಚಕಟ್ಟು ಜಮೀನುಗಳಿಗೆ ನೀರಾವರಿಗಾಗಿ ಎಡದಂಡೆ ಮುಖ್ಯ ಕಾಲುವೆಗೆ
5 ಸಾವಿರ, ಬಲದಂಡೆ ಮುಖ್ಯ ಕಾಲುವೆಗೆ 2600 ಕ್ಯೂಸೆಕ್, ಆರ್.ಎಲ್.ಎಸ್ 350 ಕ್ಯೂಸೆಕ್‌ನಷ್ಟು ನೀರನ್ನು ಕಾಲುವೆ ಜಾಲಗಳಿಗೆ ಹರಿಸಲಾಗುತ್ತಿದೆ ಎಂದು ಕೃಭಾಜನನಿ ಮೂಲಗಳಿಂದ ತಿಳಿದು ಬಂದಿದೆ