Advertisement

ಕ್ವಾರಂಟೈನ್‌ನಲ್ಲಿರುವವರಲ್ಲಿ ಆತ್ಮಸ್ಥೈರ್ಯ ಮೂಡಿಸಿ

09:24 AM Jun 23, 2020 | Suhan S |

ಹೊನ್ನಾಳಿ: ಕ್ವಾರೈಂಟೈನ್‌ನಲ್ಲಿರುವ ಗ್ರಾಮೀಣ ಪ್ರದೇಶದವರುಲ್ಲಿ ಆತ್ಮಸ್ಥೈರ್ಯ ಮೂಡಿಸಿ. ಇಲ್ಲದಿದ್ದರೆ ಅವರಲ್ಲಿ ಭಯ ಹೆಚ್ಚಾಗುತ್ತದೆ ಎಂದು ಜಿಪಂ ಅಧ್ಯಕ್ಷೆ ದೀಪಾ ಜಗದೀಶ್‌, ಆರೋಗ್ಯ ಇಲಾಖೆ ಅ ಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಸೋಮವಾರ ನಡೆದ ಕೋವಿಡ್‌-19 ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚಿಗೆ ಕೋವಿಡ್ ಸೋಂಕು ನಗರ-ಪಟ್ಟಣ ಪ್ರದೇಶಗಳಲ್ಲಿತ್ತು. ಈಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿರುವುದರಿಂದ ಜನ ಭಯಭೀತರಾಗಿದ್ದಾರೆ. ಅವರಿಗೆ ಮುಂಜಾಗ್ರñತಾ ಕ್ರಮವಾಗಿ ಮಾಸ್ಕ್ ಧರಿಸುವಂತೆ ಹಾಗೂ ಸ್ಯಾನಿಟೈಸರ್‌ ಬಳಸುವಂತೆ ಹಾಗೂ ಬಹುಮುಖ್ಯವಾಗಿ ಸ್ವತ್ಛತೆಯಿಂದ ಇರುವಂತೆ ತಿಳಿಸಿ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್‌ ಮಾಡಿ. ಸಾಮಾಜಿಕ ಅಂತರ ಕಾಪಾಡಲು ಬಿಇಒ ಕ್ರಮ ವಹಿಸಬೇಕು ಎಂದರು. ಜಿಪಂ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಈ ವಿಷಯದಲ್ಲಿ ಪಿಡಿಒಗಳು ನಿರ್ಲಕ್ಷ್ಯ ವಹಿಸಬಾರದು ಎಂದು ತಿಳಿಸಿದರು.

ಜಿಪಂ ಸದಸ್ಯರಾದ ಉಮಾ, ಸುರೇಂದ್ರ ನಾಯ್ಕ, ತಾಪಂ ಪ್ರಭಾರಿ ಅಧ್ಯಕ್ಷ ರಂಗನಾಥ್‌, ಉಪಾಧ್ಯಕ್ಷ ತಿಪ್ಪೇಶಪ್ಪ, ಸದಸ್ಯರಾದ ಶಿವಾನಂದ್‌, ರವಿಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಕೆಂಚಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next