ಮಂಗಳೂರು: ಕೇವಲ ಕಡತಗಳ ನಿರ್ವಹಣೆಯಲ್ಲಿ ಕಳೆದು ಹೋಗದೆ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಿ – ಇದು ದ.ಕ. ಜಿ.ಪಂ. ಸಿಇಒ ಡಾ| ಕುಮಾರ್ ಅವರು ತಾ.ಪಂ. ಕಾರ್ಯ ನಿರ್ವಹಣಾಧಿ ಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದ ಕಿವಿಮಾತು.
ಅವರು ಜಿಲ್ಲಾ ಪಂಚಾಯತ್‌ನಲ್ಲಿ ಗುರುವಾರ ವಿವಿಧ ವಿಷಯಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾ ಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರಕಾರದ ನಿರ್ದೇಶನದಂತೆ ದ.ಕ. ಜಿ.ಪಂ. ವ್ಯಾಪ್ತಿಯ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುವಲ್ ಸಮೀಕ್ಷೆ ನಡೆಸಿ, ಅದನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಪಂಚ ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ, ಅಧಿಕಾರಿ ಗಳು ಗ್ರಾ.ಪಂ. ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು, ಪ್ಲೇಸ್ಟೋರ್‌ನಿಂದ ಆರ್.ಡಬ್ಯೂಎಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಗ್ರಾಮದಲ್ಲಿರುವ ಬೋರ್‌ವೆಲ್, ಕೆರೆಗಳನ್ನು ಜಿಯೋಟ್ಯಾಗಿಂಗ್‌ಗೆ ಒಳಪಡಿಸಬೇಕು ಎಂದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಂಥ ಮಿತ್ರ ಯೋಜನೆ ಅನುಷ್ಠಾನ ಸಮರ್ಪಕವಾಗ ಬೇಕು, ಗ್ರಾಮಸ್ಥರು ಹಾಗೂ ವಿದ್ಯಾ ರ್ಥಿ ಗಳನ್ನು ಗ್ರಾಮಗಳ ಗ್ರಂಥಾಲಯಗಳತ್ತ ಆಕ ರ್ಷಿಸುವ ಕೆಲಸ ಮಾಡಬೇಕು ಎಂದರು.
ಇದಕ್ಕೂ ಮುನ್ನ ಸ್ವತ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಇಒ ಕುಮಾರ್ ಅವರು, ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿ ಸುವುದು ಕೇವಲ ಪೌರಕಾರ್ಮಿಕರು ಮತ್ತು ಸರಕಾರದ ಇಲಾಖೆಗಳ ಜವಾಬ್ದಾರಿಯೇ ಅಲ್ಲ, ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಪಾಲ್ಗೊಳ್ಳಬೇಕು ಎಂದರು.
ಉಪ ಕಾರ್ಯದರ್ಶಿ ಕೆ. ಆನಂದ ಕುಮಾರ್, ಯೋಜನಾ ನಿರ್ದೇಶಕ ಎಚ್.ಆರ್. ನಾಯಕ್, ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್, ತಾ.ಪಂ. ಇಒಗಳಾದ ಭವಾನಿ ಶಂಕರ್, ಕುಸುಮಾಧರ್, ದಯಾವತಿ, ರಾಜಣ್ಣ ಹಾಗೂ ಸ್ವತ್ಛಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಡೊಂಬಯ್ಯ ಇಡಿRದು, ಪವನ್ ಕುಮಾರ್ ಎಸ್. ಶೆಟ್ಟಿ ಹಾಗೂ ನವೀನ್, ಜಲಜೀವನ್ ಮಿಷನ್‌ನ ವಿN°àಶ್ ಮೊದಲಾದವರು ಉಪಸ್ಥಿತರಿದ್ದರು.