ನವದೆಹಲಿ: ಬುಲೆಟ್ ಬೈಕ್ ಬಹುಮಾನ ಗೆಲ್ಲಬೇಕಾ? ಹಾಗಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿ!
– ಯಾರಿಗುಂಟು ಯಾರಿಗಿಲ್ಲ ಅದೃಷ್ಟ? ಒಂದು ಕೈನೋಡಿಯೇ ಬಿಡೋಣವೇ? ಇಂಥ ಒಂದು ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ಸಾಮಾನ್ಯ ಸೇವೆಗಳ ಕೇಂದ್ರ (ಸಿಎಸ್‌ಸಿ).
ಈ ಬಗ್ಗೆ ಅದು ಟ್ವೀಟ್ ಮಾಡಿ ಮಾಹಿತಿ ಪ್ರಕಟಿಸಿದೆ. ಮಾಸಾಂತ್ಯದ ಒಳಗಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿ ಬುಲೆಟ್ ಬೈಕ್ ಗೆಲ್ಲಲು ಅವಕಾಶ ಉಂಟು. ಅಂದ ಹಾಗೆ ಇಂಥ ಅವಕಾಶವನ್ನು ಕಲ್ಪಿಸಲಾಗಿರುವುದು ಗ್ರಾಮೀಣ ಮಟ್ಟದಲ್ಲಿರುವ ಸಂಸ್ಥೆಗಳಿಗೆ (ವಿಎಲ್‌ಇ).
ಇಷ್ಟು ಮಾತ್ರವಲ್ಲದೆ, ಸಾಮಾನ್ಯ ಸೇವೆಗಳ ಕೇಂದ್ರಗಳ ಜತೆಗೆ ನೋಂದಣಿ ಮಾಡಿಕೊಂಡಿರುವ ವಿಎಲ್‌ಇಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿಸಿದರೆ 1 ಲಕ್ಷ ರೂ. ವರೆಗೆ ಕಮಿಷನ್ ಗೆಲ್ಲಲೂ ಅವಕಾಶ ಕಲ್ಪಿಸಲಾಗಿದೆ. ಸಿಎಸ್‌ಸಿ ಮೂಲಕ 25 ಲಕ್ಷ ಮಂದಿ ರಿಟರ್ನ್ಸ್ ಸಲ್ಲಿಸುವ ಸಾಧ್ಯತೆ ಇದೆ. ಡಿ.31ರ ಮೊದಲು 10 ಸಾವಿರ ರಿಟರ್ನ್ಸ್ ಸಲ್ಲಿಕೆ ಮಾಡುವ ವಿಎಲ್‌ಇಗಳಿಗೆ ಬುಲೆಟ್ ಬೈಕ್ ಅನ್ನು ನೀಡಲಾಗುತ್ತದಂತೆ.