Advertisement

ಕಡತ ಕರಗಿಸುವಲ್ಲಿ ಕಚೇರಿ ಅಧಿಕಾರಿಗಳ ಸಾಹಸ!

01:22 AM Feb 17, 2022 | Team Udayavani |

ಕಾರ್ಕಳ: ರಜಾ ದಿನಗಳಲ್ಲಿ ನೀರಸದಿಂದ ಕೂಡಿರುತ್ತಿದ್ದ ತಾಲೂಕು ಕಚೇರಿಯಲ್ಲಿ ಆಡಳಿತ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ರಜೆ, ವಿಶ್ರಾಂತಿ, ವಾರಾಂತ್ಯದ ಮೂಡ್‌ನ‌ಲ್ಲಿ ಇರುತಿದ್ದ ಅಧಿಕಾರಿಗಳು, ಸಿಬಂದಿಗಳು ದಿನವೂ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಆಡಳಿತ ಯಂತ್ರಕ್ಕೆ ಕ್ಷಿಪ್ರ ಪ್ರಗತಿ ಸಿಕ್ಕಿದೆ.

Advertisement

ಆಡಳಿತಕ್ಕೆ ಚುರುಕು ಕೊಡುವ ಉದ್ದೇಶ ದಿಂದ ವಿಲೇವಾರಿಯಾಗದೆ ಬಾಕಿ ಉಳಿದಿ ರುವ ಕಡತ ವಿಲೇವಾರಿ ಗೊಳಿಸುವ ಕಡತ ವಿಲೇವಾರಿ ಸಪ್ತಾಹಕ್ಕೆ ತಾ|ನಲ್ಲೇ ಫೆ. 12ರಂದು ಚಾಲನೆ ಸಿಕ್ಕಿದೆ. ಅನಂತರದಲ್ಲಿ ತಾ| ಕಚೇರಿನಲ್ಲಿ ಕಡತ ವಿಲೇವಾರಿ ಸಂಬಂ ಧಿಸಿ ಚಟುವಟಿಕೆಗಳು ಬಿರುಸಾಗಿವೆ. ಅಧಿಕಾರಿಗಳು, ಸಿಬಂದಿ ಚುರುಕಿನ ಕೆಲಸ ನಡೆಸುತ್ತಿದ್ದಾರೆ. ಅಧಿಕಾರಿಗಳು, ಸಿಬಂದಿ ಬೆಳಗ್ಗೆ 9ರೊಳಗೆ ಕಚೇರಿಗೆ ಹಾಜರಾಗುತ್ತಿದ್ದಾರೆ. ಬಿಡುವಿಲ್ಲದೆ ರಾತ್ರಿ 9ರ ತನಕವೂ ಕೆಲಸ ನಡೆಯುತ್ತಿದೆ.

ತಾ| ಕಚೇರಿಯಲ್ಲಿ ಸಾರ್ವಜನಿಕ ವಲಯದ ವಿವಿಧ ಇಲಾಖೆಗೆ ಸಂಬಂಧಿಸಿ ಕಡತಗಳು ಕೆಲವು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಅವುಗಳನ್ನು ಇತ್ಯರ್ಥಪಡಿಸಿ ವಿಲೇವಾರಿ ಮಾಡುವುದು, ಆಡಳಿತಕ್ಕೆ ಚುರುಕು ನೀಡುವುದು ಕಡತ ವಿಲೇವಾರಿಯ ಉದ್ದೇಶವಾಗಿದೆ. ಕಡತ ವಿಲೇವಾರಿ ಆಗದೇ ಇದ್ದಲ್ಲಿ ಇದು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಸಪ್ತಾಹದ ಮೂಲಕ ಹಳೆಯ ಕಡತ ಇತ್ಯರ್ಥಪಡಿಸುವುದು, ತಾಂತ್ರಿಕ ಕಾರಣಗಳ ಕಡತಕ್ಕೆ ಹಿಂಬರಹ ಹಿಂಬರಹ ನೀಡುವುದು.

ಜಿಲ್ಲಾ ಮಟ್ಟದಲ್ಲಿ ವಿಲೇವಾರಿ ಆಗಬೇಕಿರುವುದನ್ನು ಕಳುಹಿಸಿ ಕೊಡುವುದು. ಜನಪರ ಯೋಜನೆ, ಅಭಿವೃದ್ಧಿ ಕಾಮಗಾರಿಗಳ ಶೀಘ್ರ ಅನು ಷ್ಠಾನಕ್ಕೆ ಕಾಳಜಿ ದಕ್ಷತೆ ಪ್ರದರ್ಶಿಸಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಸಚಿವ ವಿ.ಸುನಿಲ್‌ಕುಮಾರ್‌ ಅವರು ಕೊಟ್ಟಿದ್ದರು. ಅದರಂತೆ ಕಡತ ವಿಲೇವಾರಿ ಸಪ್ತಾಹ ನಡೆಸಿ, ಬಳಿಕ ಫೆ. 19ಕ್ಕೆ ಇತ್ಯರ್ಥವಾದ ಅರ್ಜಿಗಳ ವಿತರಣೆಯನ್ನು ಬೃಹತ್‌ ಕಂದಾಯ ಮೇಳ ನಡೆಸಲಾಗುತ್ತಿದೆ. ಮುಂದಿನ ಎಲ್ಲ ದಿನಗಳಲ್ಲಿ ಮುಂದುವರಿಸಿಕೊಂಡು ಇಡೀ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಜನಸ್ನೇಹಿಯಾಗಿಸುವುದು ಸಪ್ತಾಹದ ಉದ್ದೇಶವಾಗಿದೆ.

Advertisement

ತಹಶೀಲ್ದಾರ್‌, ಉಪ ತಹಶೀಲ್ದಾರ್‌ ಮೇಲುಸ್ತುವಾರಿಯಲ್ಲಿ ತಾ| ಕಚೇರಿ ಯಲ್ಲಿ 18 ಮಂದಿ ವಿಷಯ ನಿರ್ವಾಹಕರು ಅರ್ಜಿಗಳ ವಿಲೇವಾರಿ ಕಾರ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಜಿ ಸ್ವೀಕೃತಿ ಕೊಠಡಿ ಸಂಖ್ಯೆ 8ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಡತಗಳು ಶಾಖಾ ಮುಖ್ಯಸ್ಥರಿಂದ ಉಪ ತಹಶೀಲ್ದಾರ್‌ ಮೇಜಿಗೆ ಬಂದು ಬಳಿಕ ತಹಶೀಲ್ದಾರ್‌ಗೆ ಸಲ್ಲಲ್ಪಡುತ್ತದೆ. ರವಿವಾರವೂ ಕಡತ ವಿಲೇವಾರಿ ನಡೆಸಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಸರಕಾರದ 70 ಇಲಾಖೆಗಳು ಕಾರ್ಯನಿರ್ವಹಿಸುತ್ತವೆ. ಇವುಗಳ ಪೈಕಿ ಸುಮಾರು 30ರಷ್ಟು ಇಲಾಖೆಗಳು ತಾ| ಕಚೇರಿ ವ್ಯಾಪ್ತಿಗೆ ಬರುತ್ತದೆ. ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಉಳಿದಿರುವುದು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಕಾರ್ಕಳ ತಾ| ಕಚೇರಿಯಲ್ಲಿ 4,008 ಹಳೆಯ ಕಡತ ವಿಲೇವಾರಿಗೆ ಬಾಕಿಯಿದೆ.

ಡಿಸಿ, ಎಸಿ ಪರಿಶೀಲನೆ
ತಾಲೂಕು ಕಚೇರಿ ಅಧಿಕಾರಿ, ಸಿಬಂದಿ ಕಡತ ಯಜ್ಞದ ಮೊರೆ ಹೋಗಿದ್ದಾರೆ. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ ಮೊದಲಾದ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡತ ವಿಲೇವಾರಿ ಸಪ್ತಾಹ ನಡೆಯುತ್ತಿರುವ ಕಚೇರಿಗೆ ಆಗಮಿಸಿ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಸಹಾಯಕ ಆಯುಕ್ತರು ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿ ಹೋಗಿದ್ದರೆ, ಡಿಸಿ, ಜಿ.ಪಂ. ಸಿಇ ಒ ಫೆ. 16ರಂದು ಸಂಜೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7,498 ಕಡತಗಳ ಪೈಕಿ ಈವರೆಗೆ 3,155 ಕಡತಗಳನ್ನು ವಿಲೇವಾರಿ ಯಾಗಿದೆ. ಕಂದಾಯ ಇಲಾಖೆಯ ಕಾರ್ಕಳ ಮತ್ತು ಹೆಬ್ರಿ ತಾ| ಕಚೇರಿಯಲ್ಲಿ 2,032 ಕಡತಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಕಳ ಮತ್ತು ಹೆಬ್ರಿ ತಾ.ಪಂಗಳಲ್ಲಿ 392 ಕಡತಗಳು, ಕಾರ್ಕಳ ಪುರಸಭೆ ಕಚೇರಿಯಲ್ಲಿ 59 ಕಡತಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇàರಿಯಲ್ಲಿ 75 ಕಡತಗಳು, ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ 93 ಕಡತಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 388 ಕಡತಗಳು ಹಾಗೂ ಇತರ ಇಲಾಖೆಗಳ 116 ಕಡತಗಳು ಸೇರಿ ಒಟ್ಟು 3,155 ಕಡತಗಳನ್ನು ವಿಲೇವಾರಿಯಾಗಿದೆ.

ಕಣ್ಣ ಮುಂದೆ ಕಡತ ರಾಶಿ
ಕಚೇರಿಯೊಳಗೆ ಅಧಿಕಾರಿ, ಸಿಬಂದಿಯ ಮೇಜಿನ ಮೇಲೆ ಕಡತಗಳು ರಾಶಿ ಬಂದು ಬಿದ್ದಿವೆ. ಪರಿಶೀಲನೆ, ವಿಲೇವಾರಿ, ಜತೆ ಸಾರ್ವಜನಿಕರಿಂದ ಬಂದ ಅಹವಾಲುಗಳ ಸ್ವೀಕಾರ, ಪರಿಶೀಲನೆ ಇತ್ಯಾದಿ ನಡೆಯುತ್ತಿವೆ. ರಜಾ ದಿನಗಳಲ್ಲಿ ಕಚೇರಿಗೆ ಸಾರ್ವಜನಿಕರು ಯಾರೂ ತಲೆ ಹಾಕುವುದಿಲ್ಲ. ಹೀಗಾಗಿ ಅಧಿಕಾರಿಗಳಿಗೆ ನಿಶ್ಚಿಂತತೆಯಿಂದ ಕಡತಗಳತ್ತ ಕಣ್ಣಾಡಿಸಲು ನೆರವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಮೂಹಿಕವಾಗಿ ತಾಲೂಕು ಕಚೇರಿ ಸಿಬಂದಿ
ಕಚೇರಿಗೆ ಹಾಜರಾಗಿದ್ದು ಕಾರ್ಕಳದ ಇತಿಹಾಸದಲ್ಲಿ ಇದೇ ಮೊದಲು ಎಂದೇ ಹೇಳಬಹುದು.

ಬಹು ಪ್ರಯೋಜನ
4 ದಿನದಲ್ಲಿ ಹಳೆಯ ಕಡತಗಳನ್ನು ಸಾಕಷ್ಟು ಪ್ರಮಾಣದಲ್ಲಿ ವಿಲೇವಾರಿ ನಡೆಸಿದ್ದಾರೆ. ತಾ|ಕಚೇರಿ ಅಧಿಕಾರಿಗಳ ಜತೆ ಸಭೆ ಕೂಡ ನಡೆಸಿ ಚರ್ಚಿಸಿದ್ದೇನೆ. ಬಾಕಿ ಉಳಿದ ಅರ್ಜಿಗಳ ವಿಲೇವಾರಿ ಶೀಘ್ರವೇ ಪೂರ್ಣಗೊಳಿಸಿ, ಫೆ.19ರ ಕಂದಾಯ ಮೇಳದಲ್ಲಿ ವಿತರಣೆ ಯಾಗಲು ಫ‌ಲಾನುಭವಿಗಳನ್ನು ಗುರುತಿಸಲು ಸೂಚಿಸಿದ್ದೇನೆ. ನಾಗರಿಕರಿಗೆ ಬಹು ಪ್ರಯೋಜನ ಇದರಿಂದ ಆಗಲಿದೆ.
-ಎಂ .ಕೂರ್ಮ ರಾವ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next