Advertisement
ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜ ನೀಡಿರುವ ದೂರಿನ ಪ್ರಕಾರ, ಲಡ್ಡು ತಿರುಪತಿ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಕೊಡುವ ಪವಿತ್ರ ಪ್ರಸಾದವಾಗಿದ್ದು, ಅದನ್ನು ರಾಜಕೀಯ ಕಾರಣಗಳಿಗಾಗಿ ಅಪವಿತ್ರಗೊಳಿಸಲಾಗಿದೆ. ತನ್ಮೂಲಕ ಕೋಟ್ಯಂತರ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಪ್ರಾಣಿಗಳ ಕೊಬ್ಬನ್ನು ಬೆರಕೆ ಮಾಡಿರುವುದು ಆಘಾತಕಾರಿ. ಇದೊಂದು ಉದ್ದೇಶಪೂರ್ವಕ ದುಷ್ಕೃತ್ಯವಾಗಿದ್ದು ಆಸ್ತಿಕರ ಭಾವನೆ, ನಂಬಿಕೆಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ 272 ಹಾಗೂ 273ನೇ ವಿಭಾಗದಲ್ಲಿ ಉಲ್ಲೇಖೀತವಾಗಿರುವ ಆಹಾರ ಕಲಬೆರಕೆ, 291ರಲ್ಲಿ ಉಲ್ಲೇಖೀತವಾಗಿರುವ ಅಧಿಕಾರ ದುರ್ಬಳಕೆ ವಿಷಯದ ನೆಲೆಯಲ್ಲಿ ದೂರು ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.
Advertisement
Puttur: ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ದೂರು ದಾಖಲು
08:45 PM Sep 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.