Advertisement

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

11:10 PM Dec 30, 2024 | Team Udayavani |

ಮಂಗಳೂರು: ದಕ್ಷಿಣ ರೈಲ್ವೇಯಿಂದ ಮಹಾಕುಂಭ ಮೇಳ 2025 ರ ಅಂಗವಾಗಿ ಮಂಗಳೂರು ಸೆಂಟ್ರಲ್-ವಾರಾಣಸಿ ಮಧ್ಯೆ ವಿಶೇಷ ರೈಲು ಸಂಚರಿಸಲಿದೆ.

Advertisement

ನಂ.06019 ಮಂಗಳೂರು ಸೆಂಟ್ರಲ್-ವಾರಾಣಸಿ ವಿಶೇಷ ರೈಲು ಮಂಗಳೂರಿನಿಂದ ಜನವರಿ 18 ಹಾಗೂ ಫೆಬ್ರವರಿ 15 ರಂದು ಶನಿವಾರ ಮುಂಜಾನೆ 4.15 ಕ್ಕೆ ಹೊರಟು ವಾರಾಣಸಿಗೆ ಮೂರನೇ ದಿನ ಮಧ್ಯಾಹ್ನ 2.50 ಕ್ಕೆ ತಲಪುವುದು.

ನಂ.06020 ವಾರಾಣಸಿ- ಮಂಗಳೂರು ಸೆಂಟ್ರಲ್‌ ರೈಲು ವಾರಾಣಸಿಯಿಂದ ಜನವರಿ 21 ಹಾಗೂ ಫೆಬ್ರವರಿ 18ರಂದು ಮಂಗಳವಾರಗಳಂದು ಸಂಜೆ 6.20 ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ ನಾಲ್ಕನೇ ದಿನದಂದು ಮುಂಜಾನೆ 2.30 ಕ್ಕೆ ತಲಪುವುದು.

ಈ ರೈಲುಗಳು ಕಾಸರಗೋಡು, ನೀಲೇಶ್ವರ, ಪಯ್ಯನ್ನೂರು, ಕೋಝಿಕೋಡ್‌, ಶೋರ್ನೂರು ಜಂಕ್ಷನ್‌, ಅರಕೋಣಮ್‌, ವಿಜಯವಾಡ,ವಾರಂಗಲ್‌, ನಾಗಪುರ್‌, ಇಟಾರ್ಸಿ, ಜಬಲ್ಪುರ ಮಾರ್ಗವಾಗಿ ಸಂಚರಿಸಲಿವೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next