Advertisement

Fiji; ರಾಷ್ಟ್ರಪತಿ ಮುರ್ಮುಗೆ ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ

11:23 PM Aug 06, 2024 | Team Udayavani |

ಸುವಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಕಂಪಾನಿಯನ್‌ ಆಫ್ ಆರ್ಡರ್‌ ಆಫ್ ಫಿಜಿ’ಗೆ ಭಾಜನರಾಗಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಷ್ಟ್ರಪತಿ ಕಚೇರಿ, “ಫಿಜಿ ಅಧ್ಯಕ್ಷ ರತು ವಿಲಿಯಮ್‌ ಮೈವಲಿಲಿ ಕಟೋನಿವೆರೆ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಂಪಾನಿಯನ್‌ ಆಫ್ ಆರ್ಡರ್‌ ಆಫ್ ಫಿಜಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದು ಫಿಜಿಯ ಅತ್ಯುನ್ನತ ಗೌರವವಾಗಿದೆ’ ಎಂದು ಬರೆದುಕೊಂಡಿದೆ.

ರಾಷ್ಟ್ರಪತಿಗಳು 2 ದಿನಗಳ ಫಿಜಿ ಪ್ರವಾಸದಲ್ಲಿ ಇದ್ದಾರೆ. ಮಂಗಳವಾರ ಅವರು ಫಿಜಿ ಸಂಸತ್‌ ಅನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next