ಹಿರೋಶಿಮ: ಎಫ್ಐಎಚ್ ವನಿತಾ ಹಾಕಿ ಸೀರೀಸ್ ಫೈನಲ್ಸ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಭಾರತವು ಫಿಜಿ ತಂಡದ ವಿರುದ್ಧ 11-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ. ಗುರ್‌ಜೀತ್ ಕೌರ್ ಹ್ಯಾಟ್ರಿಕ್ ಗೋಲು ಸಹಿತ 4 ಗೋಲು ಹೊಡೆದು ಅತ್ಯುತ್ತಮ ಪ್ರದರ್ಶನ ನೀಡಿದರು.
ಗುರ್‌ಜೀತ್ 15, 19, 21 ಹಾಗೂ 22ನೇ ನಿಮಿಷದಲ್ಲಿ ಗೋಲು ಹೊಡೆ ದು ಸಂಭ್ರಮಿಸಿದರೆ, ಮೋನಿಕಾ 11ನೇ ಹಾಗೂ 13ನೇ ನಿಮಿಷದಲ್ಲಿ 2 ಗೋಲು ಬಾರಿಸಿದರು. ಉಳಿದಂತೆ ಲಾಲ್ರೆಮಿÕಯಮಿ (4ನೇ ನಿಮಿಷ), ರಾಣಿ (10ನೇ), ವಂದನಾ ಕತಾರಿಯಾ (12ನೇ ನಿಮಿಷ), ಲಿಲಿಮಾ ಮಿನುj (51ನೇ ನಿಮಿಷ) ಗೋಲು ಹೊಡೆದು ಭಾರತದ ಭರ್ಜರಿ ಗೆಲುವಿನ ರೂವಾರಿಗಳಾದರು.
ವಿಶ್ವದ 9ನೇ ರ್‍ಯಾಂಕಿನ ಭಾರತ ಪಂದ್ಯದ ಆರಂಭದಲ್ಲೇ ಕೆಳ ರ್‍ಯಾಂಕಿನ ಎದುರಾಳಿ ಫಿಜಿ ವಿರುದ್ಧ ಪ್ರಾಬಲ್ಯ ಮೆರೆಯಿತು. ಮೊದಲ ಕ್ವಾರ್ಟರ್‌ನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ 5-0 ಅಂತರ ಕಾಯ್ದುಕೊಂಡಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಗುರ್‌ಜೀತ್ ಸತತ 3 ಗೋಲು ಬಾರಿಸಿ ಭಾರತಕ್ಕೆ 8-0 ಮು ನ್ನಡೆ ತಂದುಕೊಟ್ಟರು. ಅನಂತರ 3 ಗೋಲುಗಳನ್ನು ಬಾರಿಸಿದ ಭಾರತದ 11-0 ಗೋಲುಗಳ ಅಂತರದಿಂದ ಜಯಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಶನಿವಾರ ಸೆಮಿಫೈನಲ್
ಲೀಗ್ ಹಂತದ ಈ ಹಿಂದಿನ ಎರಡು ಪಂದ್ಯಗಳಲ್ಲಿ ಭಾರತವು ಪೋಲೆಂಡ್ ಹಾಗೂ ಉರುಗ್ವೆ ತಂಡವನ್ನು ಸೋಲಿಸಿತ್ತು. ಲೀಗ್‌ನ ಮೂರು ಪಂದ್ಯಗಳಲ್ಲೂ ಗೆದ್ದಿರುವ ಭಾರತದ ವನಿತೆಯರು ಅಜೇಯ ಹಾಗೂ “ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಭಾರತದ ಎದುರಾಳಿ ಯಾವುದೆಂದು ಗುರುವಾರ ನಡೆಯಲಿರುವ ಕ್ರಾಸ್ ಓವರ್ ಪಂದ್ಯದ ಅನಂತರ ತಿಳಿಯಲಿದೆ. ಗುರುವಾರ ನಡೆಯಲಿರುವ ಕ್ರಾಸ್ ಓವರ್ ಪಂದ್ಯದಲ್ಲಿ “ಎ’ ಗುಂಪಿನ 3ನೇ ಸ್ಥಾನದಲ್ಲಿರುವ ಉರುಗ್ವೆ ಹಾಗೂ “ಬಿ’ ಗುಂಪಿನ 2ನೇ ಸ್ಥಾನ ಪಡೆದ ತಂಡ ಮುಖಾಮುಖೀಯಾಗಲಿದೆ.