Advertisement

Jerusalem: ಜೆರುಸಲೇಮ್‌ ಮಸೀದಿಯಲ್ಲಿ ಮತ್ತೆ ಕಾದಾಟ

09:09 PM Apr 06, 2023 | Team Udayavani |

ಜೆರುಸಲೇಂ: ಇಸ್ರೇಲಿನ ಜೆರುಸಲೇಂನಲ್ಲಿರುವ ಅಲ್‌-ಅಖ್ಸಾ ಮಸೀದಿಗಾಗಿ ಸತತ 2ನೇ ದಿನವೂ ಮುಸ್ಲಿಮರು ಹಾಗು ಯಹೂದಿಗಳ ನಡುವಿನ ಗಲಭೆ ಮುಂದುವರಿದಿದೆ. ಮಸೀದಿ ಒಳಗಿರುವ ಪ್ಯಾಲೆಸ್ತೀನ್‌ ಮುಸಲ್ಮಾನರನ್ನು ಹೊರಹಾಕಲು ಇಸ್ರೇಲಿ ಪೊಲೀಸರು ಬಲಪ್ರಯೋಗ ಮಾಡಿದ ಹಿನ್ನೆಲೆ ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ರಂಜಾನ್‌ ಆಚರಣೆಯ ನಿಮಿತ್ತ ಪ್ಯಾಲಿಸ್ತೇನ್‌ ಮುಸಲ್ಮಾನರು ಮಸೀದಿ ಬಿಟ್ಟುಕೊಡದೇ ಪಟ್ಟು ಹಿಡಿದಿದ್ದರೆ, ಇತ್ತ ಯಹೂದಿಗಳು ಪಾಸೋವರ್‌ ಆಚರಣೆ ಶುರುವಾದ ಹಿನ್ನೆಲೆ ಮಸೀದಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ.

Advertisement

ಮಸೀದಿ ಹೊರಗೆ ಭದ್ರತೆಗೆ ನಿಯೋಜಿಸಿರುವ ಸೇನೆ ಸಿಬ್ಬಂದಿ ಮೇಲೆಯೇ ಪ್ಯಾಲೆಸ್ತೀನ್‌ ಮುಸ್ಲಿಮರು ಪಟಾಕಿ ಎಸೆದಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಬಿಗಡಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next