Advertisement

Fighter Teaser ಔಟ್: ಇಂಟರ್‌ನೆಟ್‌ ನಲ್ಲಿ ಬೆಂಕಿ ಹಚ್ಚಿದ ಹೃತಿಕ್‌ – ದೀಪಿಕಾ ಕೆಮೆಸ್ಟ್ರಿ

01:41 PM Dec 08, 2023 | Team Udayavani |

ಮುಂಬಯಿ: ಹೃತಿಕ್‌ ರೋಷನ್‌ – ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ʼಫೈಟರ್‌ʼ ಸಿನಿಮಾದ ಟೀಸರ್‌ ಶುಕ್ರವಾರ(ಡಿ.8 ರಂದು) ರಿಲೀಸ್‌ ಆಗಿದೆ.

Advertisement

ಬಾಲಿವುಡ್‌ ನಲ್ಲಿ ʼವಾರ್‌ʼ, ʼಬ್ಯಾಂಗ್‌ ಬ್ಯಾಂಗ್‌ʼ, ʼಪಠಾಣ್‌ʼ ಮೂಲಕ ಮೋಡಿ ಮಾಡಿರುವ ಸಿದ್ಧಾರ್ಥ್‌ ಆನಂದ್‌ ಅವರು ʼಫೈಟರ್‌ʼ ಸಿನಿಮಾವನ್ನು‌ ಡೈರೆಕ್ಟ್‌ ಮಾಡಿದ್ದಾರೆ.

ಹೃತಿಕ್, ದೀಪಿಕಾ ಮತ್ತು ಅನಿಲ್ ವಾಯುಪಡೆ ಅಧಿಕಾರಿಗಳ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಝಲಕ್‌ ನ್ನು ಟೀಸರ್‌ ನಲಿ ತೋರಿಸಲಾಗಿದೆ. ವಾಯುಯಾನದ ರೋಚಕ ಸಾಹಸನ್ನು ಟೀಸರ್‌ ನಲ್ಲಿ ತೋರಿಸಲಾಗಿದೆ. ವಾಯುಯಾನದ ದೃಶ್ಯಗಳು ಗಮನ ಸೆಳೆಯುತ್ತದೆ. ದೇಶಕ್ಕಾಗಿ ಹೋರಾಡುವ ವಾಯುಪಡೆಯ ಖಡಕ್‌ ಆಫೀಸರ್‌ ಲುಕ್‌ ನಲ್ಲಿ ಹೃತಿಕ್‌, ದೀಪಿಕಾ ಹಾಗೂ ಅನಿಲ್‌ ಕಪೂರ್‌ ಕಾಣಿಸಿಕೊಂಡಿದ್ದಾರೆ.

ಬಿಗ್‌ ಬಜೆಟ್‌ ನಲ್ಲಿ ಸಿನಿಮಾ ತಯಾರಾಗಿದ್ದು, ಅದರ ಝಲಕ್‌ ಟೀಸರ್‌ ನಲ್ಲಿ ಎದ್ದು ಕಾಣುತ್ತದೆ.

ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಹೃತಿಕ್‌ ಜೊತೆಗೆ ಲಿಪ್‌ ಲಾಕ್‌ ಮಾಡುವ ದೃಶ್ಯ‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ದೀಪಿಕಾ – ಹೃತಿಕ್‌ ಕೆಮೆಸ್ಟ್ರಿ ಇಂಟರ್‌ ನೆಟ್‌ ನಲ್ಲಿ ಸದ್ದು ಮಾಡುತ್ತಿದೆ.

Advertisement

ಸ್ಕ್ವಾಡ್ರನ್ ಲೀಡರ್ ಶಂಶೇರ್ “ಪ್ಯಾಟಿ” ಪಠಾನಿಯಾ ಆಗಿ ಹೃತಿಕ್‌ ಕಾಣಿಸಿಕೊಳ್ಳಲಿದ್ದು, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ “ಮಿನ್ನಿ” ರಾಥೋಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ “ರಾಕಿ” ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2024 ರ ಜನವರಿ 25 ರಂದು ಸಿನಿಮಾ ತೆರೆ ಕಾಣಲಿದೆ.


 

Advertisement

Udayavani is now on Telegram. Click here to join our channel and stay updated with the latest news.

Next