Advertisement

ಆಲಯ ಕಟ್ಟುವವರೆಗೂ ಹೋರಾಟ

11:34 AM May 15, 2017 | |

ಬೆಂಗಳೂರು: ವಸಂತನಗರದ ಜಸ್ಮಾಭವನದ ಹಿಂಭಾಗದಲ್ಲಿದ್ದ ಪಾಲಿಕೆ ಜಾಗದಲ್ಲಿ ನಿರ್ಮಿಸಿದ್ದ ದೇವಸ್ಥಾನ ಹಾಗೂ ಚರ್ಚ್‌ ತೆರವುಗೊಳಿಸಿದ ಬಿಬಿಎಂಪಿ ಕ್ರಮ ಖಂಡಿಸಿ ಸ್ಥಳೀಯರು ಶನಿವಾರ ಅಹೋರಾತ್ರಿ ಧರಣಿ ನಡೆಸಿದ್ದಾರೆ.

Advertisement

ದೇವಸ್ಥಾನ ಹಾಗೂ ಚರ್ಚ್‌ ತೆರವುಗೊಳಿಸಿದ ಸ್ಥಳದಲ್ಲಿ ಶನಿವಾರ ರಾತ್ರಿ ಪೂರ್ತಿ ಧರಣಿ ನಡೆಸಿದ ಸ್ಥಳೀಯರು, ಬಿಬಿಎಂಪಿ ಅಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.

ಕಳೆದ 30 ವರ್ಷಗಳಿಂದ ಇರುವ ದೇವಾಲಯ ಹಾಗೂ ಚರ್ಚ್‌ನ್ನು ಏಕಾಏಕಿ ತೆರವುಗೊಳಿಸಿರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಬಿಬಿಎಂಪಿ ಮತ್ತೆ ದೇವಾಲಯ ಹಾಗೂ ಚರ್ಚ್‌ ನಿರ್ಮಿಸಿ ಕೊಡುವವರೆಗೂ ಹೋರಾಟ ಮುಂದುವರಿಸುವುದಾಗಿ ಧರಣಿ ನಿರತರು ತಿಳಿಸಿದ್ದಾರೆ.

ದೇವಾಲಯ ಹಾಗೂ ಚರ್ಚ್‌ ತೆರವುಗೊಳಿಸಿದ ಪಾಲಿಕೆಯ ಕ್ರಮ ಖಂಡಿಸಿ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ. ದೇವಾಲಯ ತೆರವಾದ ಸ್ಥಳದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next