Advertisement

ಕೃಷ್ಣೆ ನೀರಿಗೆ ಪಕ್ಷಾತೀತ ಹೋರಾಟ ಅಗತ್ಯ

02:40 PM Feb 01, 2020 | Suhan S |

ಕೊಪ್ಪಳ: ಕೃಷ್ಣಾ ನೀರಾವರಿ ಯೋಜನೆ ಹಾಗೂ ಮಹದಾಯಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಚರ್ಚೆ ಮಾಡಿ ಜಲ ವಿವಾದವನ್ನು ಇತ್ಯರ್ಥ ಪಡಿಸಬೇಕು. ಕೃಷ್ಣಾ ನೀರಾವರಿಗೆ ಪಕ್ಷಾತೀತ ಹೋರಾಟದ ಅಗತ್ಯವಿದೆ. ಸಿಎಂ ಬಿ.ಎಸ್‌.ವೈ ಅವರು ಸರ್ವಪಕ್ಷದ ನಿಯೋಗದೊಂದಿಗೆ ಕೇಂದ್ರಕ್ಕೆ ತೆರಳಲಿ, ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಒತ್ತಾಯಿಸಿದರು.

Advertisement

ಯಲಬುರ್ಗಾದಲ್ಲಿ ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಯ ವಸ್ತುಸ್ಥಿತಿ ಹಾಗೂ ಸತ್ಯಾಂಶ ಕುರಿತು ತಾವೇ ಬರೆದಿದ್ದ ಪುಸ್ತಕವನ್ನು ರೈತರು, ರೈತ ಮಹಿಳೆಯರಿಂದ ಬಿಡುಗಡೆ ಮಾಡಿಸಿಮಾತನಾಡಿದರು. ಕೃಷ್ಣಾ ನೀರಾವರಿ ಯೋಜನೆಗೆ 20 ವರ್ಷಗಳಿಂದ ಹೋರಾಟ ನಡೆದಿದೆ. ನೀರಾವರಿ ಯೋಜನೆಗಳಿಗೆ ಹಲವು ಅಡೆತಡೆಗಳು ಬಂದಿವೆ. ಅದರಲ್ಲೂ ಕೃಷ್ಣಾ ಎ ಸ್ಕೀಂಗಿಂತ ಬಿ ಸ್ಕೀಂ ಯೋಜನೆಯು ತುಂಬ ವಿಳಂಬವಾಗುತ್ತಿದೆ.

ಕೊಪ್ಪಳ ಭಾಗದ ರೈತರು ಈ ಯೋಜನೆಗೆ ಕೊನೆಯ ಭಾಗದವರಾಗಿದ್ದೇವೆ. 1969ರಲ್ಲಿ ಇಂದಿರಾ ಗಾಂಧಿ  ಪ್ರಧಾನಿಯಾಗಿದ್ದ ವೇಳೆ ನ್ಯಾ. ಬಚಾವತ್‌ ನೇತೃತ್ವದಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣ ರಚನೆ ಮಾಡಲಾಗಿತ್ತು.

ಆಗ ನದಿಯ ಒಟ್ಟು 2500 ಟಿಎಂಸಿ ಅಡಿ ನೀರಿನ ಹರಿವಿನ ಲೆಕ್ಕಾಚಾರದಲ್ಲಿ ಶೇ. 75ರಷ್ಟು ನೀರನ್ನು ನ್ಯಾ| ಬಚಾವತ್‌ ಅವರು ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪು ನೀಡಿ 1973ರಲ್ಲಿ ಎ ಸ್ಕೀಂನಡಿ ಹಂಚಿಕೆ ಮಾಡಿತು. ತರುವಾಯ ಇನ್ನುಳಿದ ಶೇ. 25ರಷ್ಟು ನೀರನ್ನು ಕೃಷ್ಣಾ ಬಿ ಸ್ಕೀಂನಲ್ಲಿ ಹಂಚಿಕೆ ಮಾಡುವಂತೆ ತೀರ್ಪಿನಲ್ಲಿ ತಿಳಿಸಿದ್ದರು. ಅದರಂತೆ ಕೃಷ್ಣಾ ನ್ಯಾಯಾಧೀಕರಣ-2ರಲ್ಲಿ (ಕೃಷ್ಣಾ ಬಿ ಸ್ಕೀಂ) ಕರ್ನಾಟಕಕ್ಕೆ 177 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. 1999 ರಿಂದಲೂ ಈ ಹೋರಾಟವು ನಡೆದಿದೆ ಎಂದರು.

2010ರಲ್ಲಿ ನ್ಯಾ| ಬ್ರಿಜೇಶ್‌ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಧೀಕರಣವು-2ನೇ ತೀರ್ಪು ನೀಡಿತು. ಈ ಬಿ ಸ್ಕೀಂಗೆ ಕೇಂದ್ರ ಸರ್ಕಾರ ಗೆಜೆಟ್‌ ಅಧಿ  ಸೂಚನೆ ಹೊರಡಿಸಬೇಕಿತ್ತು. ಆದರೆ ಈವರೆಗೂ ಹೊರಡಿಸಿಲ್ಲ. ಗೆಜೆಟ್‌ ಅಧಿಸೂಚನೆ ಹೊರಡಿಸಿದರೆ ಮಾತ್ರ ಬಿ ಸ್ಕೀಂನಡಿ ಕರ್ನಾಟಕಕ್ಕೆ ಕೃಷ್ಣಾ ನೀರು ಸಿಗಲಿದೆ. ಆದರೆ ತೀರ್ಪು-2ನ್ನು ತಡೆ ಹಿಡಿಯುವಂತೆ ಆಂಧ್ರಪ್ರದೇಶ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದಿದೆ. ಕೇಂದ್ರ ಸರ್ಕಾರ ತಡೆಯಾಜ್ಞೆ ತೆರವು ಮಾಡಲು ಮುಂದಾಗಿಲ್ಲ. ಇನ್ನೂ ವಿಚಾರಣೆ ಮುಂದೂಡುತ್ತಲೇ ಇದೆ ಎಂದರು.

Advertisement

ತೀರ್ಪು-2ರಲ್ಲಿ ಕರ್ನಾಟಕಕ್ಕೆ 177 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, 2013ರಲ್ಲಿ ಮತ್ತೆಪರಿಷ್ಕೃತ ತೀರ್ಪು ನೀಡಿದ್ದರಿಂದ 7 ಟಿಎಂಸಿ ಅಡಿ ನೀರು ಜಲಚರಗಳಿಗೆ ಹಂಚಿಕೆಯಾದರೆ, ಉಳಿದ 166 ಟಿಎಂಸಿ ಅಡಿ ನೀರು ನಮಗೆ ಸೇರಿದ್ದಾಗಿದೆ.ಈ ನೀರು ಬಳಕೆಯಾಗುತ್ತಿಲ್ಲ. 2013ರಲ್ಲಿ ಕೃಷ್ಣಾ ಬಿ ಸ್ಕೀಂ ಜಾರಿ ಮಾಡುವೆವು ಎಂದು ಆಗ ಸಿಎಂ ಆಗಿದ್ದ ಜಗದೀಶ ಶೆಟ್ಟರ್‌ ತರಾತುರಿಯಲ್ಲಿ ಯಲಬುರ್ಗಾ ತಾಲೂಕಿನ ಕಲಾಲಬಂಡಿಯಲ್ಲಿ ಅಡಿಗಲ್ಲು ನೆರವೇರಿಸಿದರು. ಅನುದಾನವನ್ನೇಕೊಟ್ಟಿಲ್ಲ. ಪ್ರಧಾನಿ ಮೋದಿ ಕೂಡ ಕೃಷ್ಣಾ ಯೋಜನೆ ಹಾಗೂ ಮಹದಾಯಿ ನೀರು ಹಂಚಿಕೆ ಬಗ್ಗೆಯೂ ಮಾತನಾಡುತ್ತಿಲ್ಲ. ಕೇಂದ್ರವು ತೀರ್ಪು-2ನ್ನು ಗೆಜೆಟ್‌ ಅಧಿಸೂಚನೆ ಹೊರಡಿಸುತ್ತಿಲ್ಲ. ಸಂಸತ್ತಿನಲ್ಲೂ ಚರ್ಚೆ ಮಾಡುತ್ತಿಲ್ಲ. ಈ ಕುರಿತು ಅಧಿ ವೇಶನದಲ್ಲಿ ಹಲವು ಬಾರಿ ಗಂಟೆಗಟ್ಟಲೆ ಮಾತನಾಡಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ ಸೇರಿ ಇತರರು ಉಪಸ್ಥಿತರಿದ್ದರು.

ಪ್ರಧಾನಿ ಮಧ್ಯ ಪ್ರವೇಶಿಸಲಿ :  ಕೃಷ್ಣಾ ನೀರಾವರಿ ಕುರಿತು ಪಕ್ಷಾತೀತ ಹೋರಾಟದ ಅಗತ್ಯವಿದೆ. ಪ್ರತಿಯೊಬ್ಬರೂ ಹೋರಾಟ ಮಾಡಲೇಬೇಕಿದೆ. ಸಿಎಂ ಬಿಎಸ್‌ ವೈ ಅವರು ಕೃಷ್ಣಾ ಬಗ್ಗೆ ಸರ್ವ ಪಕ್ಷದೊಂದಿಗೆ ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗಲಿ. ಮೋದಿ ಅವರು ಶೀಘ್ರ ಮಧ್ಯ ಪ್ರವೇಶ ಮಾಡಿ ನಾಲ್ಕು ರಾಜ್ಯಗಳ ಸಿಎಂ ಜೊತೆ ಚರ್ಚೆ ನಡೆಸಿ ಜಲ ವಿವಾದ ಬಗೆಹರಿಸಬೇಕು.

ರಾಜ್ಯ ಲಾ ಸೆಲ್‌ ಬಲವಿಲ್ಲ :  ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ನೀರಾವರಿಗೆ ನಾರಿಮನ್‌ ಅವರೊಂದಿಗೆ ಚರ್ಚೆ ನಡೆಸುತ್ತಿತ್ತು. ನೀರಾವರಿ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಹೋರಾಟ ಮಾಡಲಾಗುತ್ತಿತ್ತು. 2018ರ ಈಚೆಗೆ ರಾಜ್ಯದಲ್ಲಿನ ಲಾ ಸೆಲ್‌(ಕಾನೂನು ವಿಭಾಗ) ತುಂಬಾ ವೀಕ್‌ ಆಗಿದೆ. ಸರ್ಕಾರ ವಕೀಲರ ವಿಭಾಗ ವೀಕ್‌ ಮಾಡಿಬಿಟ್ಟಿದೆ. ಅಲ್ಲಿ ಯಾರೂ ಇಲ್ಲದಂತಹ ಸ್ಥಿತಿ ಎದುರಾಗಿದೆ ಎಂದರು.

ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಸಭೆ :  ಬಿ ಸ್ಕೀಂ ಉಕ ಭಾಗಕ್ಕೆ ಅವಶ್ಯವಾಗಿದೆ. ವಿಜಯಪುರ, ಯಾದಗಿರಿ, ಕೊಪ್ಪಳ, ಗದಗ, ಕಲಬುರರ್ಗಿ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಬಿ ಸ್ಕೀಂ ಕುರಿತು ಶೀಘ್ರದಲ್ಲಿಯೇ ವಿಚಾರ ಸಂಕಿರಣ ನಡೆಸಲಿದ್ದೇನೆ. ಜನರಿಗೆ ಈ ಬಗ್ಗೆ ಮನವರಿಕೆಯಾಗಬೇಕಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರತಿ ವರ್ಷ ನೀರಾವರಿಗೆ 10 ಸಾವಿರ ಕೋಟಿ ಅನುದಾನ ಕೊಟ್ಟಿದೆ ಎಂದರು.

ಸಂಪುಟದ ಉಪ ಸಮಿತಿ ರಚಿಸಿ:  ಕೃಷ್ಣಾ ಯೋಜನೆಗಳ ಕುರಿತು ಕಾಂಗ್ರೆಸ್‌ ಸರ್ಕಾರದ ಉಪ ಸಮಿತಿ ನೀಡಿದ ವರದಿ ಕುರಿತು ಬಿಜೆಪಿಸರ್ಕಾರ ಚರ್ಚೆ ನಡೆಸಲಿ, ಈ ಯೋಜನೆಗೆ 1.34 ಲಕ್ಷ ಹೆಕ್ಟೆರ್‌ ಭೂಸ್ವಾಧಿಧೀನ ಮಾಡಬೇಕಿದೆ. ಬಿಜೆಪಿ ಸರ್ಕಾರ ತಕ್ಷಣ ಸಂಪುಟದ ಉಪ ಸಮಿತಿ, ವಿಶೇಷ ಭೂ ಸ್ವಾಧೀನ ಸಮಿತಿ ರಚನೆ ಮಾಡಲಿ. ಇದಲ್ಲದೇ ವೈಜ್ಞಾನಿಕ ಕಮಿಟಿಯನ್ನೂ ರಚನೆ ಮಾಡಲಿ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next