ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ನೇಕಾರರ ಸಂಕಷ್ಟ ಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಇದುವರೆಗೂ ಸ್ಪಂದಿ ಸಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಈ ಕುರಿತು ರಾಜ್ಯಾದ್ಯಂತ ಸಭೆ ನಡೆಸಲಾಗುತ್ತಿದೆ ಎಂದು ನೇಕಾರರ ಸಂಘಗಳ ಒಕ್ಕೂಟದ ರಾಜ್ಯಾ ಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.
ನಗರದ ಗುರುಕುಲ ಶಾಲೆಯ ಆವರಣದಲ್ಲಿ ನಡೆದ ನೇಕಾರರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 13.5 ಲಕ್ಷ ನೇಕಾರರ ಕುಟುಂಬಗಳಿದ್ದು, 60 ಲಕ್ಷ ನೇಕಾರರು ಇದ್ದಾರೆ. ಆದರೆ ರಾಜ್ಯ ಸರ್ಕಾರ 2 ಸಾವಿರ ಪರಿಹಾರ ಘೋಷಣೆ ಮಾಡಿದೆ. ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದಾಗಿ ನೇಕಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರಾಜ್ಯ ಸರ್ಕಾರ ಜವಳಿ ಇಲಾಖೆಗೆ ನೀಡುತ್ತಿರುವ ಶೇ.96 ರಷ್ಟು ಅನುದಾನ ಗಾರ್ಮೆಂಟ್ಸ್ ಮಾಲಿಕರಿಗೆ ಹೋಗುತ್ತಿದೆ ವಿನಾ ನೇಕಾರರಿಗೆ ಸಿಗುತ್ತಿಲ್ಲ.
ನೇಕಾ ರರ ಸಂಕಷ್ಟ ಅರಿಯದ ಶಾಸಕರು, ಐಎಎಸ್ ಅಧಿಕಾರಿಗಳ ಮಾತಿನಿಂದ ನೇಕಾರರಿಗೆ ಅನ್ಯಾಯವಾಗು ತ್ತಿದೆ. ನೇಕಾರರಿಗೆ ಅವಮಾನ ಮಾಡಿದರೆ ಸಹಿಸು ವುದಿಲ್ಲ. ಈ ದಿಸೆಯಲ್ಲಿ ಮುಖ್ಯಮಂತ್ರಿ, ಜವಳಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೇಕಾರರ ಸಂಕಷ್ಟ ಅರಿಯಲು ಸಭೆ ನಡೆಸಬೇಕು. ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯಲು ಬೆಳ ಗಾವಿಯಿಂದ ವಿಧಾನ ಸೌಧದವರೆಗೆ ಪಾದಯಾತ್ರೆ ನಡೆಸಲು ಈಗಾಗಲೇ 9 ಜಿಲ್ಲೆಗಳಲ್ಲಿ ನೇಕಾರರ ಪೂರ್ವಭಾವಿ ಸಭೆ ನಡೆಸಲಾಗಿದೆ.
ಮೊದಲ ಹಂತ ವಾಗಿ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ನಂತರ ಪಾದಯಾತ್ರೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸಿಎಂಗೆ ನಮ್ಮ ತಾಲೂಕಿನ ನೇಕಾರರ ಸಮಸ್ಯೆ ಕೇಳುವ ವ್ಯವಧಾನವಿಲ್ಲ. ತಾಲೂಕಿನ ಸಮಸ್ಯೆಗಳ ಬಗ್ಗೆ ಕೇಳಲು ಸಿಎಂ ಕಚೇ ರಿಗೆ ಹೋದರೆ ಸೌಜನ್ಯಕ್ಕಾದರೂ ಮನವಿ ಸ್ವೀಕರಿ ಸುವ ಸೌಜನ್ಯ ಹೊಂದಿಲ್ಲ.
ನೇಕಾರರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು. ಕೋವಿಡ್ 19ದಿಂದಾಗಿ ನೇಯ್ಗೆ ಉದ್ಯಮ ಅವನತಿ ಹಾದಿಯಲ್ಲಿದೆ. ಹೀಗಾಗಿ ಆಳುವ ಸರ್ಕಾರಗಳು, ನೇಕಾರರ ಹಿತ ಕಾಪಾಡಬೇಕಿದೆ. ನೇಕಾರರ ಬೇಡಿಕೆ ಈಡೇರಿಸಬೇಕು. ಅದಕ್ಕೆ ಪಕ್ಷಾತೀತ, ಸಂಘಟನಾತೀತ ಹೋರಾಟ ನಡೆಸಲೇಬೇಕಿದ್ದು, ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ವಿವಿಧ ಪಕ್ಷಗಳ ಮುಖಂಡರು ಅಭಿಪ್ರಾಯಪಟ್ಟರು.
ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣೆ ಸಮಿತಿ ಅಧ್ಯಕ್ಷ ಪಿ.ಎ . ವೆಂಕಟೇಶ್, ಕಾರ್ಯದರ್ಶಿ ಅಶೋಕ್, ಸಹ ಕಾರ್ಯ ದರ್ಶಿ ಎಂ.ಮುನಿರಾಜು, ಖಜಾಂಚಿ ಕೆ.ಮಲ್ಲೇಶ್ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೇಕಾರ ಮುಖಂಡರು
ಭಾಗವಹಿಸಿದ್ದರು.