Advertisement

ಯುದ್ಧ  ಗೆಲ್ಲುವ ತವಕ; ಬದುಕಿಗಾಗಿ ಹೋರಾಟ

08:01 AM Mar 11, 2019 | |

ಯುದ್ಧ ಕಾಲದ ಸನ್ನಿವೇಶದಲ್ಲಿ ಯುದ್ಧ ಗೆಲ್ಲಲು ಮಾತ್ರ ವಲ್ಲ ಬದುಕಿಗಾಗಿಯೂ ಹೋರಾಟ ನಡೆಯುತ್ತದೆ. ಸಾವು, ಬದುಕಿನ ಮಧ್ಯೆಯೂ ಸಾಹಸ ಮೆರೆದವರು ಗೆಲ್ಲುತ್ತಾರೆ, ಯಶಸ್ವಿಯಾಗುತ್ತಾರೆ ಎಂಬ ವಿಷಯವನ್ನೇ ಮುಖ್ಯ ಭೂಮಿಕೆಯಾಗಿಟ್ಟು ಕೊಂಡು ನಿರ್ಮಾಣವಾದ ಚಿತ್ರ ಮಾಸ್ಟರ್‌ ಆ್ಯಂಡ್‌ ಕಮಾಂಡರ್‌.

Advertisement

ಅದು ನೆಪೋಲಿಯನ್‌ ಯುದ್ಧ ನಡೆಯುತ್ತಿದ್ದ ಕಾಲ. ಸಾಮ್ರಾಜ್ಯ ಸ್ಥಾಪಿಸುವತ್ತ ದೃಷ್ಟಿ ನೆಟ್ಟಿರುವ ನೆಪೋಲಿಯನ್‌ ಒಂದೊಂದೇ ದೇಶಗಳನ್ನು ಗೆದ್ದುಕೊಂಡು ಬರುತ್ತಿರುತ್ತಾನೆ. ಅವನ ಮುಂದಿನ ಗುರಿ ಬ್ರಿಟನ್‌ ದೇಶವನ್ನು ಕಬಳಿಸುವುದು. ಈ ಉದ್ದೇಶದಿಂದಲೇ ಅವನ ಸೈನಿಕರು ಹಡಗುಗಳಲ್ಲಿ ತಂಡೋಪಾದಿಯಲ್ಲಿ ಹೊರಟಿದ್ದಾರೆ. ಇತ್ತ ಅವರನ್ನು ಮಾರ್ಗ ಮಧ್ಯದಲ್ಲೇ  ತಡೆಯುವ ಪ್ರಯತ್ನವೂ ನಡೆಯುತ್ತಿ ರುತ್ತದೆ.ಬ್ರಿಟನ್‌ ಆ ಹೊಣೆಯನ್ನು ಕ್ಯಾಪ್ಟನ್‌ ಜಾಕ್‌ ಆಬ್ರೆಗೆ ವಹಿಸುತ್ತದೆ. ಆತ ಹಡಗೊಂದರ ಕ್ಯಾಪ್ಟನ್‌.

ಸಾಮಾನ್ಯವಾಗಿ ಸಿನೆಮಾಗಳಲ್ಲಿ ಕಾರು, ಬೈಕ್‌ಗಳ ಚೇಸನ್ನು ಬಹುತೇಕ ಮಂದಿ ನೋಡಿರುತ್ತಾರೆ. ಆದರೆ ಈ ಸಿನೆಮಾದಲ್ಲಿ ಎರಡು ಹಡಗುಗಳ ರೋಮಾಂಚಕ ಚೇಸಿಂಗ್‌ ಸನ್ನಿವೇಶವನ್ನು ನೋಡಬಹುದಾಗಿದೆ. ಈ ರೋಮಾಂಚಕ ಸಾಹಸಮಯ ಪಯಣದಲ್ಲಿ ಜಾಕ್‌ ಗೆ ಜತೆಯಾಗಿದ್ದು ಸ್ಟೀಫ‌ನ್‌. ಆತನೂ ಜಾಕ್‌ ಥರ ಸಾಹಸಿಗನೇ, ಆದರೆ ವೃತ್ತಿಯಲ್ಲಿ ವೈದ್ಯ. ಅವರಿಬ್ಬರೂ ಫ್ರೆಂಚ್‌ ಹಡಗುಗಳನ್ನು ಎದುರಿಸುವ ಸಾಹಸಮಯ ಸಿನೆಮಾ ಇದಾಗಿದೆ.

ಪೀಟರ್‌ ವೈರ್‌ ನಿರ್ದೇಶಿಸಿರುವ ಈ ಚಿತ್ರ ಇಂಗ್ಲಿಷ್‌ ಭಾಷೆಯಲ್ಲಿ 2003ರಲ್ಲಿ ತೆರೆಗೆ ಬಂದಿದೆ. ಬದುಕಿನಲ್ಲಿ ಗೆಲ್ಲಬೇಕಾದರೆ ಸಾಧಿಸುವ ಛಲವಿರಬೇಕು. ಜತೆಗೆ ಎಷ್ಟೇ ಸವಾಲುಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂಬುದನ್ನೇ ಈ ಚಿತ್ರದಲ್ಲಿ ಹೇಳಲಾಗಿದೆ. ಅತ್ಯಂತ ಕುತೂಹಲ ಹುಟ್ಟಿಸುವ ಈ ಚಿತ್ರದ ರೋಮಾಂಚಕ ದೃಶ್ಯಗಳು ಮನ ಪಟಲದಲ್ಲಿ ಸ್ಥಿರ ಕಾಲ ಉಳಿಯುವಂತೆ ಮಾಡಿದ್ದಾರೆ ಚಿತ್ರ ನಿರ್ಮಾಪಕರು. 

Advertisement

Udayavani is now on Telegram. Click here to join our channel and stay updated with the latest news.

Next