Advertisement

ಸಾತಂತ್ರ್ಯ ಹೋರಾಟದ ಬಗ್ಗೆ ಅರಿವು ಮೂಡಿಸಿ

05:43 PM Aug 16, 2021 | Team Udayavani |

ತುಮಕೂರು: ಲಕ್ಷಾಂತರ ಜನರ ತ್ಯಾಗಬಲಿದಾನದಿಂದ ಗಳಿಸಿರುವ ಸ್ವಾತಂತ್ರÂವನ್ನು ಉಳಿಸಲು ಇಂದಿನ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ ಎಂದುವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳಸಂಸ್ಥಾಪಕಕೆ.ಬಿ. ಜಯಣ್ಣ ತಿಳಿಸಿದರು.

Advertisement

ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿಭಾನುವಾರ ಏರ್ಪಡಿಸಿದ್ದ 75ನೇವರ್ಷದ ಸ್ವಾತಂತ್ರÂ ದಿನಾಚರಣೆಯಲ್ಲಿತ್ರಿವರ್ಣ ಧ್ವಜಾರೋಹಣ ನೆರವೇರಿಸಿಮಾತನಾಡಿದ ಅವರು, ಇಂದಿನ ಯುವಜನರಿಗೆ ಸ್ವಾತಂತ್ರÂ ಹೋರಾಟದ ಬಗ್ಗೆಅರಿವು ಮೂಡಿಸಬೇಕು ಎಂದರು.

ಜಿಲ್ಲೆಯ ಗುಪ್ತಚರ ವಿಭಾಗದಪೊಲೀಸ್‌ ಉಪಅಧೀಕ್ಷಕ ಎಸ್‌. ಎಂ.ಶಿವಕುಮಾರ್‌ ಮಾತನಾಡಿ, ಇಂದಿನಯುವ ಜನಾಂಗವು ಮಾದಕ ವಸ್ತುಗಳಸೇವನೆಯಂತಹ ದುಶ್ಚಟಗಳಿಗೆದಾಸರಾಗುತ್ತಿದ್ದು, ಶಿಕ್ಷಕರು ಹಾಗುಪೋಷಕರು ಹೆಚ್ಚಿನ ಕಾಳಜಿ ವಹಿಸಿಅವುಗಳಿಂದಾಗುವ ದುಷ್ಪರಿಣಾಮಗಳಕುರಿತಾಗಿ ಅರಿವು ಮೂಡಿಸಿಆರೋಗ್ಯಯುತ ಸಮಾಜವನ್ನುನಿರ್ಮಾಣ ಮಾಡುವಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದರು.

ವಿದ್ಯಾವಾಹಿನಿಸಂಸ್ಥೆಯ ಕಾರ್ಯದರ್ಶಿ ಎನ್‌. ಬಿ.ಪ್ರದೀಪ್‌ ಕುಮಾರ್‌ ಮಾತನಾಡಿ, ದೇಶಕ್ಕೆಸ್ವಾತಂತ್ರÂ ತರುವಲ್ಲಿ ಶ್ರಮಿಸಿದ ನಾಯಕರನ್ನು ಸ್ಮರಿಸಿ ಎಲ್ಲರೂ ದೇಶಾಭಿಮಾನಬೆಳೆಸಿಕೊಳ್ಳಬೇಕು ಎಂದರು.ಕೋವಿಡ್‌ನ‌ಂತಹ ಕಠಿಣಸಂದರ್ಭದಲ್ಲಿಯೂ ಸಹ, ಸಂಸ್ಥೆಯವಿದ್ಯಾರ್ಥಿಗಳಿಗೆ ಹಲವಾರು ಪ್ರತಿಷ್ಠಿತಕಂಪನಿಗಳ ವತಿಯಿಂದ ಕ್ಯಾಂಪಸ್‌ಸಂದರ್ಶಗಳನ್ನು ಏರ್ಪಡಿಸಿ 320ಕ್ಕೂಅಧಿಕ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿಉತ್ತಮ ಉದ್ಯೋಗಗಳಿಗೆಆಯ್ಕೆಯಾಗಿರುವುದಕ್ಕೆ ಸಂತೋಷವ್ಯಕ್ತಪಡಿಸಿದರು. ತುಮಕೂರಿನ ವಿಟೆಕ್‌ಸಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕಕೆ.ಜೆ. ನಾಗಪ್ರಿಯ, ಪ್ರಾಂಶುಪಾಲ ಕೆ.ಪಿ.ನವೀನ್‌ಕುಮಾರ್‌, ಉಪ ಪ್ರಾಂಶುಪಾಲಎ.ಪಿ. ಪ್ರಶಾಂತ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next