ಉಡುಪಿ: ನೆರೆಮನೆಯವರ ಪೆಂಡಾಲ್ ಹಾಕುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕೋಪಗೊಂಡ ಯುವಕನೋರ್ವ ರಿಕ್ಷಾಕ್ಕೆ ಬೆಂಕಿ ಹಾಕಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ನಿಟ್ಟೂರಿನ ಹನುಮಂತನಗರ ಎಂಬಲ್ಲಿ ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಮನೆಯ ಎದುರು ಶ್ಯಾಮಿಯಾನ ಹಾಕುವ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಬಗ್ಗೆ ರಿಕ್ಷಾ ಚಾಲಕ ನೆರೆಮನೆಯ ದಿವಾಕರ್ ಬೆಳಡ ಅವರು ಎದುರು ಮನೆಯ ಮಲ್ಪೆ ದಕ್ಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಖಲೀಂ ವಿರುದ್ಧದ ಉಡುಪಿ ನಗರ ಠಾಣೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಖಲೀಂ ಮತ್ತು ರಿಕ್ಷಾ ಚಾಲಕ ದಿವಾಕರ್ ಅವರನ್ನು ಗಲಾಟೆ ಮಾಡದಂತೆ ಎಚ್ಚರಿಸಿ ಹೋಗಿದ್ದರು ಎನ್ನಲಾಗಿದೆ.
ಬಳಿಕ ರಾತ್ರಿ 12.30 ಸುಮಾರಿಗೆ ಖಲೀಂ ಕೋಪದಿಂದ ಎದುರು ಮನೆಯ ದಿವಾಕರ್ ಅವರ ರಿಕ್ಷಾಕ್ಕೆ ಡಿಸೇಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಖಲೀಂ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.