ರಾಯಚೂರು: ಮತ ಚಲಾಯಿಸಲು ಬರುತ್ತಿದ್ದ ಮತದಾರರಿಗೆ ಕಮಲ ಚಿಹ್ನೆ ಇರುವ ಚೀಟಿ ನೀಡುತ್ತಿದ್ದ ಕಾರಣ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಗಳವಾಗಿದೆ.
ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದ ಹರ್ವಾಪುರದಲ್ಲಿ ಘಟನೆ ನಡೆದಿದೆ.
ಕಮಲ ಚಿಹ್ನೆ ಇರುವ ಮತ ಚೀಟಿ ನೀಡುತ್ತಿದ್ದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ಷೇಪವಾಗಿದ್ದು, ಮಾತಿನ ಚಕಮಕಿ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳ ನಡೆದಿದೆ. ಕೂಡಲೇ ಪೊಲೀಸ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಎರಡೂ ಪಕ್ಷದ ಕಾರ್ಯಕರ್ತರನ್ನು ಸ್ಥಳದಿಂದ ದೂರಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ: 58 ಲಕ್ಷ ರೂ. ಜಪ್ತಿ
ರಾಯಚೂರು ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಒಟ್ಟು 6.97ರಷ್ಟು ಮತದಾನವಾಗಿದೆ. ರಾಯಚೂರು ನಗರ – ಶೇ.5.83, ರಾಯಚೂರು ಗ್ರಾಮೀಣ-ಶೇ.8.96, ಮಾನ್ವಿ- ಶೇ.7.5, ದೇವದುರ್ಗ-ಶೇ.6, ಲಿಂಗಸ್ಗೂರು-ಶೇ.5, ಸಿಂಧನೂರು-ಶೇ 8, ಮಸ್ಕಿ-ಶೇ.8 ಮತದಾನವಾಗಿದೆ. ನಗರಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಮತದಾನವಾಗಿದೆ.