Advertisement

ಸಂವಿಧಾನ ಬದಲಿಸುವವರ ವಿರುದ್ಧ ಹೋರಾಡಿ: ಶ್ರೀಗಳು

11:07 AM Jan 01, 2018 | |

ಬೆಂಗಳೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಪರಿಶ್ರಮದಿಂದ ರಚನೆಯಾಗಿರುವ ವಿಶ್ವದ ಶ್ರೇಷ್ಠ ಸಂವಿಧಾನವನ್ನು ಬದಲಿಸಲು ಕೆಲವರು ಮುಂದಾಗಿದ್ದು, ಅಂಥವರ ವಿರುದ್ಧ ಸಂಘ ಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಚನ್ನಬಸವೇಶ್ವರ ಪೀಠದ ಚಿನ್ಮಯ ಜ್ಞಾನಿ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ.

Advertisement

ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ
ನಿರ್ಮಿಸಿರುವ 24 ಅಡಿ ಏಕಶಿಲಾ ಕೋರೆ ಗಾಂವ್‌ ವಿಜಯಸ್ತಂಭ ಲೋಕಾರ್ಪಣೆ ಹಾಗೂ 200ನೇ ವರ್ಷದ ವಿಜಯೋತ್ಸವ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. “12ನೇ ಶತಮಾನದಲ್ಲಿ ಬಸವಣ್ಣ ವರ್ಣಾಶ್ರಮ ಪದ್ಧತಿಗೆ ಅಂತ್ಯ ಹಾಡಲು ಕಲ್ಯಾಣದ ಕ್ರಾಂತಿ ಮಾಡಿದ್ದಾರೆ. ಇಂತಹ ಕ್ರಾಂತಿ ಕುರಿತು ಮೇಲ್ವರ್ಗದ ಸಾಹಿತಿಗಳು ಯಾವುದೇ ಪುಸ್ತಕದಲ್ಲಿ ಉಲ್ಲೇಖೀಸಿಲ್ಲ. ಅವ ರಿಗೆ ಸಮಾನತೆ ಬೇಕಾಗಿಲ್ಲ, ಶೋಷಣೆ ಬೇಕಾ ಗಿದೆ,’ ಎಂದು ಬೇಸರ ವ್ಯಕ್ತಪಡಿಸಿದರು. 

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆಯೂ ಮಾತನಾಡಿದ ಶ್ರೀಗಳು, “12ನೇ ಶತಮಾನದಲ್ಲಿ ಲಿಂಗಾಯತರೂ ದಲಿತರಾಗಿದ್ದರು. ಬಸವಣ್ಣನವರ ಅನುಯಾಯಿಗಳಾಗಿ ನಂತರ ಲಿಂಗಾಯತರಾಗಿ ಪರಿವರ್ತನೆಗೊಂಡರು. ಆದರೆ, ಈಗ ಪ್ರತ್ಯೇಕ
ಧರ್ಮಕ್ಕೆ ಹೋರಾಡುತ್ತಿದ್ದಾರೆ,’ ಎಂದರು. ಕೋರೆಗಾಂವ್‌ ಯುದ್ಧದ ರೀತಿಯ ಐತಿ  ಹಾಸಿಕ ಘಟನೆಗಳು ಇತಿಹಾಸದ ಪುಟಗಳಲ್ಲಿ ದಾಖಲೆಯಾಗದೆ ಉಳಿದಿರುವುದು ವಿಷಾದದ ಸಂಗತಿ. ದಲಿತರು ಹಾಗೂ ಹಿಂದುಳಿದವರು ಮಾಡಿರುವ ಹೋರಾಟದ ಘಟನೆಗಳನ್ನು ಬ್ರಾಹ್ಮಣ ಕವಿಗಳು ಕಡೆಗಣಿಸಿದ್ದಾರೆ.

ಸಂವಿಧಾನವನ್ನೇ ಬದಲಾವಣೆ ಮಾಡುವಬಾಜೀರಾಯರು ನಮ್ಮ ದೇಶದಲ್ಲಿ ಹೆಚ್ಚಾಗಿದ್ದಾರೆ. ಇಂಥವರ ವಿರುದ್ಧ ಹೋರಾಡುವ ಸೈನ್ಯ ಸಿದ್ಧಪಡಿಸಬೇಕಿದೆ.ಮನು ವಾದಿಗಳು ತಮ್ಮದೇ ಸಿದ್ಧಾಂತಗಳನ್ನು ಹೊಂದುವ ಮೂಲಕ ಸಮಾಜದಲ್ಲಿ  ಸಂಘರ್ಷ ಉಂಟು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್‌.ಬಸವರಾಜು, ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿದರು. ಬೆಂವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ, ವಿಚಾರವಾದಿ ಪ್ರೊ.ಬೋರಲಿಂಗಯ್ಯ, ಅಧ್ಯಯನ ಕೇಂದ್ರದ
ನಿರ್ದೇಶಕ, ಪ್ರೊ.ಸಿ.ಸೋಮಶೇಖರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next