ಮುಂಬಯಿ: ಕೋವಿಡ್ -19 ವಿರುದ್ಧ ಹೋರಾಡಲು 5,000ಕ್ಕೂ ಹೆಚ್ಚು ಸ್ವಯಂ ಸೇವಕರು ಸ್ವಇಚ್ಛೆಯಿಂದ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಬುಕ್ ಮೈಶೋ ಮೂಲಕ ಕೇವಲ ನಾಲ್ಕು ದಿನಗಳಲ್ಲಿ ನೋಂದಾಯಿಸಿಕೊಂಡ ಈ ಸ್ವಯಂಸೇವಕರು ರಾಜ್ಯ ಮತ್ತು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಕೋವಿಡ್ -19 ಸೆಲ್‌ನೊಂದಿಗೆ ಕೆಲಸ ಮಾಡಲಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಿಎಂಸಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಕೆಂಪು ವಲಯಗಳಲ್ಲಿ ಸ್ವಯಂಸೇವಕರ ಬೆಂಬಲ ಬೇಕು. ವೈದ್ಯಕೀಯ ಮತ್ತು ವೈದ್ಯಕೀಯೇತರ ನೆರವು ಕ್ಷೇತ್ರಗಳಲ್ಲಿ “ಸ್ವಯಂಸೇವಕರಿಗೆ ಕರೆ’ ನೀಡುವ ಮೂಲಕ ಈ ಬೆಂಬಲವನ್ನು ಸಂಗ್ರಹಿಸಲು ನಾವು ಅವರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಬುಕ್‌ವೆುçಶೋ ತಿಳಿಸಿದೆ.
ಇದೀಗ ನಾವು ಒಟ್ಟು 3,668 ಸಿಬಂದಿಗಳನ್ನು ಹೊಂದಿದ್ದೇವೆ. ಇದರಲ್ಲಿ ಗುಮಾಸ್ತರು, ವಾರ್ಡ್ ಹುಡುಗರು, ಕ್ಲೀನರ್‌ಗಳು, ಕಿರಿಯ ವೈದ್ಯರು ಮತ್ತು ತಂತ್ರಜ್ಞರು ಸೇರಿದ್ದಾರೆ. ನಾವು ಕೊಳೆಗೇರಿ ಪುನರ್ವಸತಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ. ಅಲ್ಲಿಂದ ಸುಮಾರು 30 ಎಂಜಿನಿಯರ್‌ಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ನಮ್ಮಲ್ಲಿ ಸುಮಾರು 4,000 ಸಮುದಾಯ ಆರೋಗ್ಯ ಸ್ವಯಂಸೇವಕರು ಇದ್ದಾರೆ. ಬಿಎಂಸಿ ಒಟ್ಟು 1.04 ಲಕ್ಷ ಸಿಬಂದಿಯ ಮಾನವಶಕ್ತಿ ಹೊಂದಿದೆ ಎಂದು ಬಿಎಂಸಿಯ ಉಪ ಪುರಸಭೆ ಆಯುಕ್ತ ಮಿಲಿನ್ ಸಾವಂತ್ ಹೇಳಿದ್ದಾರೆ. ಅಗತ್ಯವಿದ್ದಲ್ಲಿ, ಬಿಎಂಸಿ ತನ್ನ ರಿಯಲ್ ಎಸ್ಟೇಟ್ ಅಭಿವೃದ್ಧಿ ವಿಭಾಗದ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಮಹಾದಾ) ಸಿಬಂದಿಯನ್ನು ಕರೆಸಿಕೊಳ್ಳಬಹುದು.
ರಾಜ್ಯದಲ್ಲಿ ಸುಮಾರು 11,000 ವೈದ್ಯರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೇ 6 ರಂದು ರಾಜ್ಯದ ಖಾಸಗಿ ವೈದ್ಯಕೀಯ ಕ್ಷೇತ್ರದ ವೈದ್ಯರನ್ನು ತತ್‌ಕ್ಷಣ ಕೆಲಸಕ್ಕೆ ವರದಿ ಮಾಡಲು ಮತ್ತು ಕೋವಿಡ್ -19 ರೋಗಿಗಳಿಗೆ ಕನಿಷ್ಠ 15 ದಿನಗಳವರೆಗೆ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ರಾಜ್ಯವು ಕೇಳಿಕೊಂಡಿತ್ತು. ಮೇ 11ರವರೆಗೆ ರಾಜ್ಯಕ್ಕೆ 7,000 ಅರ್ಜಿಗಳು ಬಂದಿದ್ದವು. ಇದೀಗ ಕಾರ್ಯ ನಿರ್ವಹಿಸುತ್ತಿರುವ ಸಂಖ್ಯೆಯ ಕನಿಷ್ಠ ಎರಡು ಪಟ್ಟು ಹೆಚ್ಚಿನ ವೈದ್ಯರು ಮುಂದಿನ ಎರಡು ತಿಂಗಳು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ವೈದ್ಯರು ಹೇಳಿದರು.
ಕೋವಿಡ್ -19 ಮತ್ತಷ್ಟು ಹರಡುವುದನ್ನು ತಡೆಯಲು ಸ್ವಯಂ ಸೇವಕರ ಸೇವೆಗಳ ತುರ್ತು ಅಗತ್ಯವಿದೆ. ಕೆಲಸವನ್ನು ಹಂಚಿಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವ ಮಾನವ ಶಕ್ತಿಗೆ ತೊಂದರೆಯಾಗದಂತೆ ರಾಜ್ಯ ಸರಕಾರ ಸ್ವಯಂಸೇವಕರಿಗೆ ಕರೆ ನೀಡುತ್ತಿದೆ. ರಾಜ್ಯ ಚುನಾವಣಾ ಆಯೋಗದ ಸುಮಾರು 800 ನಿಯೋಜಿತ ಸಿಬಂದಿ ಸಹ ಬಿಎಂಸಿಯ ಕೋವಿಡ್ -19 ಸೆಲ್‌ಗೆ ಸೇರಲಿದ್ದಾರೆ.
-ಮಿಲಿನ್ ಸಾವಂತ್, ಬಿಎಂಸಿಯ ಉಪ ಪುರಸಭೆ ಆಯುಕ್ತ