Advertisement

Asia Cup; ಶಕೀಬ್, ಹೃದಯ್ ಅರ್ಧ ಶತಕ ; ಭಾರತಕ್ಕೆ 266 ರನ್ ಗುರಿ

07:07 PM Sep 15, 2023 | Team Udayavani |

ಕೊಲಂಬೊ: ಇಲ್ಲಿ ಶುಕ್ರವಾರ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನಾಯಕ ಶಕೀಬ್ ಅಲ್ ಹಸನ್ ಮತ್ತು ತೋವಿದ್ ಹೃದಯ್ ಅವರ ಅರ್ಧಶತಕಗಳ ನೆರವಿನಿಂದ ಭಾರತದ ವಿರುದ್ಧ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿಸಿದೆ.

Advertisement

ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶಕೀಬ್ (85 ಎಸೆತಗಳಲ್ಲಿ 80) ಮತ್ತು ಟೋವಿಡ್ ಹೃದಯ್ (81 ಎಸೆತಗಳಲ್ಲಿ 54 ರನ್ ) ಆರಂಭಿಕ ವಿಕೆಟ್‌ಗಳು ಪತನ ಗೊಂಡ ಬಳಿಕ ತಂಡಕ್ಕೆ ಆಧಾರವಾದರು. ನಸುಮ್ ಅಹ್ಮದ್ 44, ಮಹೇದಿ ಹಸನ್ 29 ಮತ್ತು ತಂಜಿಮ್ ಹಸನ್ ಸಾಕಿಬ್ 14 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ವೇಗಿಗಳಾದ ಮೊಹಮ್ಮದ್ ಶಮಿ (2/32), ಶಾರ್ದೂಲ್ ಠಾಕೂರ್ (3/65) ಮತ್ತು ಪ್ರಸಿದ್ಧ್ ಕೃಷ್ಣ (1/43) ಆರು ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 265 (ಶಾಕಿಬ್ ಅಲ್ ಹಸನ್ 80, ಟೋವಿಡ್ 54 ; ಶಾರ್ದೂಲ್ ಠಾಕೂರ್ 3/65)

Advertisement

Udayavani is now on Telegram. Click here to join our channel and stay updated with the latest news.

Next