Advertisement

ಫಿಫಾ ವಿಶ್ವಕಪ್‌ ವಿಜೇತ ಫ‌ುಟ್ಬಾಲಿಗರಿಗೆ ಸೋಂಕು

09:50 AM Mar 20, 2020 | sudhir |

ರೋಮ್‌: ಫ್ರಾನ್ಸ್‌ ಮತ್ತು ಇಟಲಿಯ ಮತ್ತಿಬ್ಬರು ಫ‌ುಟ್ಬಾಲಿಗರಿಗೆ ಕೋವಿಡ್ 19 ಸೋಂಕು ಹರಡಿರುವುದು ಖಚಿತಗೊಂಡಿದೆ. ಫ್ರಾನ್ಸ್‌ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಬ್ಲೆಸ್‌ ಮ್ಯಾಟ್ಯೂಡ್‌ ಹಾಗೂ ವಿಶ್ವಕಪ್‌ ವಿಜೇತ ಇಟಲಿ ತಂಡದ ತಾರಾ ಆಟಗಾರ ಮಥಾಯಿಸ್‌ ಜಕಗ್ನಿಯ ಸೋಂಕಿಗೆ ತುತ್ತಾಗಿದ್ದಾರೆ. ಇವರಿಬ್ಬರೂ ಸೀರಿ ಎ ಕ್ಲಬ್‌ ಫ‌ುಟ್ಬಾಲ್‌ ಕೂಟದಲ್ಲಿ ಭಾಗಿಯಾಗಿದ್ದರು.

Advertisement

ಇದರೊಂದಿಗೆ ಇಟಲಿಯ ಕೂಟದಲ್ಲಿ ಪಾಲ್ಗೊಂಡ ಒಟ್ಟು 13 ಫ‌ುಟ್‌ಬಾಲ್‌ ಆಟಗಾರರಿಗೆ ಸೋಂಕು ತಗುಲಿದಂತಾಗಿದೆ. ಮತ್ತಷ್ಟು ಆಟಗಾರರಿಗೆ ಸೋಂಕು ತಗುಲಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next