ದೋಹಾ: ಗೆಲುವಿನ ನಿರೀಕ್ಷೆಯಲ್ಲಿದ್ದ ಕ್ರೊವೇಷ್ಯಾ ತಂಡವು ಬುಧವಾರ ನಡೆದ “ಎಫ್’ ಬಣದ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಗೋಲುರಹಿತ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತು.
2018ರ ರನ್ನರ್ ಅಪ್ ತಂಡವಾಗಿದ್ದ ಕ್ರೊವೇಷ್ಯಾ ಆರಂಭಿಕ ಪಂದ್ಯ ಗೆದ್ದು ಶುಭಾರಂಭಗೈಯುವ ಉತ್ಸಾಹದಲ್ಲಿತ್ತು. ಆದರೆ ಮೆಕ್ಸಿಕೊ ಅಮೋಘವಾಗಿ ಆಡಿದ್ದರಿಂದ ಕ್ರೊವೇಷ್ಯಾ ಆಟಗಾರರಿಗೆ ಗೋಲು ಹೊಡೆಯುವ ಅವಕಾಶವೇ ಲಭಿಸಲಿಲ್ಲ. ಇದು ಈ ಕೂಟದ ಇಷ್ಟರವರೆಗಿನ 9 ಪಂದ್ಯಗಳಲ್ಲಿ ಮೂರನೇ ಗೋಲುರಹಿತ ಡ್ರಾ ಆಗಿದೆ.
ಎರಡೂ ತಂಡಗಳಿಗೆ ಈ ಪಂದ್ಯದಲ್ಲಿ ಗೋಲು ಹೊಡೆಯುವ ಕೆಲವೇ ಅವಕಾಶಗಳು ಲಭಿಸಿದ್ದವು. ಆದರೆ ಗೋಲ್‌ಕೀಪರ್‌ಗಳ ಉತ್ತಮ ನಿರ್ವಹಣೆಯಿಂದ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಮೊದಲ ಅವಧಿಯ ಕೊನೆ ಹಂತದಲ್ಲಿ ನಿಕೋಲಾ ವ್ಲಾಸಿಕ್ ಅವರಿಗೆ ಗೋಲು ಹೊಡೆಯುವ ಸುವರ್ಣಾವಕಾಶ ಲಭಿಸಿತ್ತು.
ಆದರೆ ಯಶಸ್ಸು ದೊರಕಲಿಲ್ಲ. ಇನ್ನೊಂದು ಸಲ ನೌಸೈರ್ ಮಜ್ರಾವುಯಿ ಅವರು ತಲೆಯಿಂದ ಹೊಡೆದ ಚೆಂಡನ್ನು ಮೊರೊಕ್ಕೊ ಗೋಲ್‌ಕೀಪರ್ ತಡೆದಿದ್ದರು. ನಾಲ್ಕು ವರ್ಷಗಳ ಹಿಂದೆ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ಕೈಯಲ್ಲಿ ಸೋತಿದ್ದ ಕ್ರೊವೇಷ್ಯಾ ಇದೀಗ ಭಾನುವಾರ ಕೆನಡಾ ತಂಡವನ್ನು ಎದುರಿಸಲಿದೆ. ಇದೇ ವೇಳೆ ಮೊರಾಕ್ಕೊ ತಂಡವು ಬೆಲ್ಜಿಯಂ ಸವಾಲಿಗೆ ಸಿದ್ಧವಾಗಿದೆ.