Advertisement

ಫಿಫಾ ವಿಶ್ವಕಪ್‌:  ಅಗ್ರ ನಾಲ್ವರಲ್ಲಿ ಯಾರಿಗೆ ವಿಶ್ವ ಕಿರೀಟ?

01:11 AM Dec 12, 2022 | Team Udayavani |

ಫಿಫಾ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮುಗಿದಿವೆ. ಬ್ರಝಿಲ್‌, ನೆದರ್ಲೆಂಡ್ಸ್‌, ಪೋರ್ಚುಗಲ್‌, ಇಂಗ್ಲೆಂಡ್‌ ತಂಡಗಳು ಈ ಘಟ್ಟದಲ್ಲಿ ಹೊರಬಿದ್ದಿವೆ. ಮಂಗಳವಾರ ತಡರಾತ್ರಿಯಿಂದ ಸೆಮಿಫೈನಲ್‌ ಆಟ. ಇಲ್ಲಿ ಆರ್ಜೆಂಟೀನಾ-ಕ್ರೊವೇಶಿಯ, ಫ್ರಾನ್ಸ್‌- ಮೊರೊಕ್ಕೊ ಎದುರಾಳಿಗಳು. ಗೆದ್ದ ತಂಡಗಳು ಫೈನಲ್‌ಗೇರಲಿವೆ. ಸೋತ ತಂಡಗಳು 3ನೇ ಸ್ಥಾನಕ್ಕಾಗಿ ಸ್ಪರ್ಧಿಸಲಿವೆ.

Advertisement

ಯಾವ ತಂಡಗಳು ಹೇಗಿವೆ, ಅವುಗಳು ಸವೆಸಿದ ಹಾದಿ ಹೇಗಿತ್ತು- ಚಿತ್ರಣ ಇಲ್ಲಿದೆ.

ನಂಬಿಕೆ ಉಳಿಸಿಕೊಂಡ ಆರ್ಜೆಂಟೀನಾ
ನಾಯಕ: ಲಿಯೋನೆಲ್‌ ಮೆಸ್ಸಿ
“ಸಿ’ ಗುಂಪಿನಲ್ಲಿದ್ದ ಆರ್ಜೆಂಟೀನಾ ತಾನಾಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯ ವಿರುದ್ಧ ಸೋತಿತ್ತು. ಅದೊಂದು ಆಘಾತಕಾರಿ ಫ‌ಲಿತಾಂಶ. ಮುಂದೆ ಸತತ 2 ಪಂದ್ಯ ಗೆದ್ದು ನಾಕೌಟ್‌ಗೆàರಿತು. ಪ್ರಿ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯವನ್ನು, ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸನ್ನು ಮಣಿಸಿತು. ಸದ್ಯ ಮೆಸ್ಸಿ ಪಡೆಯೇ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡವಾಗಿದೆ.

ಮತ್ತೆ ಫೈನಲ್‌ಗೇರುವುದೇ ಕ್ರೊವೇಶಿಯ?

ನಾಯಕ: ಲೂಕಾಸ್‌ ಮೊಡ್ರಿಕ್‌
“ಎಫ್’ ಗುಂಪಿನಲ್ಲಿದ್ದ ಕ್ರೊವೇಶಿಯ 2ನೇ ಸ್ಥಾನಿಯಾಗಿ ನಾಕೌಟ್‌ಗೆàರಿತು. 16ರ ಘಟ್ಟದಲ್ಲಿ ಜಪಾನನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತು. 8ರ ಘಟ್ಟದಲ್ಲಿ ಪ್ರಬಲ ಬ್ರಝಿಲನ್ನೂ ಇದೇ ರೀತಿಯಲ್ಲಿ ಮಣಿಸಿತು. ಇದಕ್ಕೀಗ ಸತತ 2ನೇ ಬಾರಿಗೆ ಫೈನಲ್‌ಗೇರುವ ತವಕ.

Advertisement

ಐತಿಹಾಸಿಕ ಆಟ ಮುಂದುವರಿಸುವುದೇ ಮೊರೊಕ್ಕೊ?
ನಾಯಕ: ರೊಮೇನ್‌ ಸೈಸ್‌
“ಎಫ್’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಮೇಲೇರಿದ ಮೊರೊಕ್ಕೊ ಅದ್ಭುತವಾಗಿ ಆಡಿ 16ರಲ್ಲಿ ಸ್ಪೇನನ್ನು ಶೂಟೌಟ್‌ನಲ್ಲಿ ಮಣಿಸಿತು. 8ರ ಘಟ್ಟದಲ್ಲಿ ಇನ್ನೊಂದು ಪ್ರಬಲ ಪೋರ್ಚುಗಲ್‌ ತಂಡವನ್ನು ಮಣಿಸಿತು. ಒಂದು ವೇಳೆ ಈ ತಂಡ ಫೈನಲ್‌ಗೇರಿದರೆ ಫ‌ುಟ್‌ಬಾಲ್‌ ಜಗತ್ತಿನಲ್ಲಿ ಅವಿಸ್ಮರಣೀಯ ಘಟನೆಯಾಗಲಿದೆ.

ಕಿರೀಟ ಉಳಿಸಿ ಕೊಳ್ಳುವುದೇ ಫ್ರಾನ್ಸ್‌?
ನಾಯಕ: ಹ್ಯೂಗೊ ಲಾರಿಸ್‌
“ಡಿ’ ಗುಂಪಿನಲ್ಲಿ ಆಡಿದ ಫ್ರಾನ್ಸ್‌ ಅಗ್ರಸ್ಥಾನಿಯಾಗಿ ಮೇಲೇರಿತು. 16ರ ಘಟ್ಟದಲ್ಲಿ ಪೋಲೆಂಡನ್ನು, 8ರಲ್ಲಿ ಇಂಗ್ಲೆಂಡನ್ನು ಮಣಿಸಿದೆ. 2018 ರಲ್ಲಿ ಚಾಂಪಿಯನ್‌ ಆಗಿದ್ದ ಫ್ರಾನ್ಸ್‌ ಈ ಬಾರಿಯೂ ಕಿರೀಟ ಗೆಲ್ಲುವ ಗುರಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next