ವೆಲ್ಲಿಂಗ್ಟನ್: ಹೆಚ್ಚುವರಿ ಅವಧಿಯ ಆಟದ ವೇಳೆ ಬದಲಿ ಆಟಗಾರ್ತಿ ಸಲ್ಮಾ ಪ್ಯಾರಾಲ್ಯುಲೊ ಅವರು ಹೊಡೆದ ಅಮೋಘ ಗೋಲಿನಿಂದಾಗಿ ಸ್ಪೇನ್ ತಂಡವು ನೆದರ್ಲೆಂಡ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಫಿಫಾ ವನಿತಾ ವಿಶ್ವಕಪ್ ಫುಟ್‌ಬಾಲ್ ಕೂಟದ ಸೆಮಿಫೈನಲ್ ಹಂತಕ್ಕೇರಿತು.
ಕಳೆದ ಎರಡು ವಿಶ್ವಕಪ್‌ಗ್ಳಲ್ಲಿ ಅಂತಿಮ 16ರ ಸುತ್ತಿಗಿಂತ ಮೇಲಕ್ಕೇರದ ಸ್ಪೇನ್ ತಂಡವು ಈ ಬಾರಿ ಅಮೋಘ ನಿರ್ವಹಣೆ ನೀಡಿದ್ದು ಮಂಗಳವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ಅಥವಾ ಸ್ವೀಡನ್ ತಂಡವನ್ನು ಎದುರಿಸಲಿದೆ.
ತೀವ್ರ ಪೈಪೋಟಿಯಿಂದ ಸಾಗಿದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಾಖಲಾದ ಮೂರು ಗೋಲುಗಳು ಕೊನೆ ಕ್ಷಣದದಲ್ಲಿ ದಾಖಲಾಗಿದ್ದವು. ನೆದರ್ಲೆಂಡಿನ ಡಿಫೆಂಡರ್ ಸ್ಟೆಫಾನಿ ವಾನ್ ಡೆರ್ ಗ್ರ್ಯಾಗ್ 81ನೇ ನಿಮಿಷದಲ್ಲಿ ಚೆಂಡನ್ನು ಕೈಯಲ್ಲಿ ಮುಟ್ಟಿದ ಕಾರಣ ಸ್ಪೇನ್‌ಗೆ ಪೆನಾಲ್ಟಿ ಕಿಕ್ ಅವಕಾಶ ನೀಡಲಾಯಿತು. ಮರಿಯೊನಾ ಕಾಲೆxಂಟೆ ಅವರು ಈ ಅವಕಾಶದಲಿ ಗೋಲು ಹೊಡೆದು ಮುನ್ನಡೆ ಸಾಧಿಸಿದರು. ತನ್ನ ಕೊನೆಯ ಪಂದ್ಯವನ್ನಾಡಿದ ಗ್ರ್ಯಾಗ್ 91ನೇ ನಿಮಿಷದಲ್ಲಿ ಅದ್ಭುತ ಗೋಲು ಹೊಡೆದು ಸಮಬಲ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪಂದ್ಯ ಹೆಚುjವರಿ ಅದಧಿಗೆ ಹೋಯಿತು.
9ನೇ ರ್‍ಯಾಂಕಿನ ನೆದರ್ಲೆಂಡ್ಸ್ ತಂಡವು ನಾಲ್ಕು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದಿತ್ತು. ಈ ಬಾರಿ ಹಲವು ಅಘಾತಕಾರಿ ಫಲಿತಾಂಶ ದಾಖಲಾಗಿದ್ದು ಈಗಾಗಲೇ ಅಮೆರಿಕ, ಜರ್ಮನಿ, ಕೆನಡ ಮತ್ತು ಬ್ರಝಿಲ್ ಹೊರಬಿದ್ದಿದೆ.