ಕೊಚ್ಚಿ: ಕೊಚ್ಚಿಯಲ್ಲಿ ನಡೆದ ಫಿಫಾ ಅಂಡರ್ 17 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ನಲ್ಲಿ ಒಂದಾದ ಬ್ರಝಿಲ್ ತಂಡವು ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಉರುಳಿಸಿದೆ.
“ಡಿ’ ಬಣದ ಈ ಪಂದ್ಯ ಇಲ್ಲಿನ ಜವಾಹರ್‌ಲಾಲ್ ನೆಹರೂ ಇಂಟರ್‌ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆದಿದ್ದು ಸ್ಪೇನ್ ಮುನ್ನಡೆ ಸಾಧಿಸಿತ್ತು. ವೆಸ್ಲೆ ಅವರ ಸ್ವ ಗೋಲಿನಿಂದ ಸ್ಪೇನ್ ಮುನ್ನಡೆ ಗಳಿಸುವಂತಾಯಿತು. ಆದರೆ ಬ್ರಝಿಲ್‌ನ ಲಿಂಕನ್ ಗೋಲನ್ನು ಹೊಡೆದು ಸಮಬಲ ಸಾಧಿಸಲು ಯಶಸ್ವಿಯಾದರು.
ಸಮಬಲದ ಬಳಿಕ ಬ್ರಝಿಲ್ ಆಕ್ರಮಣಕಾರಿ ಯಾಗಿ ಆಡಿದ್ದರಿಂದ ಅಂಡರ್ 17 ಯುರೋಪಿ ಯನ್ ಚಾಂಪಿಯನ್ ಸ್ಪೇನ್ ಒತ್ತಡಕ್ಕೆ ಒಳಗಾಯಿತು. ಇದರ ಲಾಭ ಪಡೆದ ಪೌಲಿನೊ ಮೊದಲ ಅವಧಿಯ ಆಟ ಮುಗಿಯಲು ಸ್ವಲ್ಪ ಸಮಯವಿರುವಾಗ ಗೋಲನ್ನು ಹೊಡೆದು ಬ್ರಝಿಲ್‌ಗೆ ಮುನ್ನಡೆ ಒದಗಿಸಿದರು. ದ್ವಿತೀಯ ಅವಧಿಯಲ್ಲಿ ಗೋಲು ಹೊಡೆಯಲು ಸ್ಪೇನ್ ಸಾಕಷ್ಟು ಒದ್ದಾಡಿದರೂ ಯಾವುದೇ ಪ್ರಯೋ ಜನವಾಗಲಿಲ್ಲ. ಅಂತಿಮವಾಗಿ ಬ್ರಝಿಲ್ ಗೆಲುವಿನ ನಗೆ ಚೆಲ್ಲಿತು.
ಜರ್ಮನಿ ಗೆಲುವಿನಾರಂಭ
ಸಿ ಬಣದ ಮೊದಲ ಪಂದ್ಯದಲ್ಲಿ ಕೋಸ್ಟಾರಿಕಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಜರ್ಮನಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತು.
ನಾಯಕ ಫೀಟ್ ಆರ್ಪ್ ಗೋಲನ್ನು ಹೊಡೆಯುವ ಮೂಲಕ ಜರ್ಮನಿಗೆ ಮುನ್ನಡೆ ಒದಗಿಸಿದರಯೂ ಆಂದ್ರೇಜ್ ಗೋಮೆಜ್ ಸ್ವಲ್ಪ ಹೊತ್ತಿನಲ್ಲಿ 1-1 ಸಮಬಲ ಸಾಧಿಸಿದ್ದರು. ಪಂದ್ಯ ಡ್ರಾದತ್ತ ಸಾಗುವ ಸೂಚನೆ ನೀಡಿತ್ತು. ಆದರೆ ಪಂದ್ಯ ಮುಗಿಯಲು ಕೆಲವೇ ಕ್ಷಣಗಳಿರುವಾಗ ನೋಹ ಆವುಕು ಗೆಲುವಿನ ಗೋಲು ಹೊಡೆದ ಕಾರಣ ಜರ್ಮನಿ ಜಯಭೇರಿ ಬಾರಿಸಿತು.