Advertisement

ಕಿರಿಯರ ಫ‌ುಟ್‌ಬಾಲ್‌: ಮೆಕ್ಸಿಕೋಗೆ ಶರಣಾದ ಭಾರತ

06:25 AM Aug 05, 2017 | Team Udayavani |

ಹೊಸದಿಲ್ಲಿ: ಆತಿಥೇಯ ಮೆಕ್ಸಿಕೋ ವಿರುದ್ಧ ನಡೆದ 17 ವರ್ಷ ವಯೋಮಿತಿಯೊಳಗಿನ ಫ‌ುಟ್ಬಾಲ್‌ ಪಂದ್ಯದಲ್ಲಿ ಭಾರತ 1-5 ಗೋಲುಗಳ ಅಂತರದ ಹೀನಾಯ ಸೋಲು ಕಂಡಿದೆ. ಭಾರತದ ಆತಿಥ್ಯದಲ್ಲಿ ನಡೆಯುವ ಅಂಡರ್‌-17 ವಿಶ್ವಕಪ್‌ ಕೂಟಕ್ಕೆ ಮೊದಲು ನಡೆದ ಅಭ್ಯಾಸ ಪಂದ್ಯ ಇದಾಗಿದೆ.

Advertisement

ಮೆಕ್ಸಿಕೋ ಅಬ್ಬರಕ್ಕೆ  ಕಡಿವಾಣ ಹಾಕಲು ಭಾರತೀಯ ಆಟಗಾರರಿಗೆ ಸಾಧ್ಯವಾಗಲಿಲ್ಲ. ಮೊದಲ ನಿಮಿಷದಲ್ಲೇ ಮೆಕ್ಸಿಕೋ 2-0 ಗೋಲುಗಳಿಂದ ಸಿಡಿದು ಭಾರತವನ್ನು ಕಂಗಾಲಾಗಿಸಿತು. ಭಾರತದ ಪರ ಅಮರ್‌ಜಿತ್‌ ಸಿಂಗ್‌ 53ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಹಂತದಲ್ಲಿ ಭಾರತ 1-2 ಗೋಲುಗಳಿಂದ ಹಿನ್ನಡೆ ತಗ್ಗಿಸಿಕೊಂಡಿತ್ತು. ಆದರೆ ಅನಂತರ ಮೆಕ್ಸಿಕೋ ಗೋಲಿನ ಮಳೆಯನ್ನೇ ಸುರಿಸಿತು. ಹೀಗಾಗಿ 5-1 ಮುನ್ನಡೆ ಪಡೆದುಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next