ಭುವನೇಶ್ವರ: ನವೀಕರಿಸಿದ ಆಸನಗಳು, ಹೊಸ ಪಿಚ್‌ಗಳು ಮತ್ತು ವಿಶ್ವ ದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುವ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಫಿಫಾ ಅಂಡರ್ -17 ವನಿತಾ ವಿಶ್ವಕಪ್ ಆಯೋಜಿಸಲು ಸಕಲ ವ್ಯವಸ್ಥೆ ಸಿದ್ಧವಾಗಿದೆ.
ಈ ಕ್ರೀಡಾಂಗಣದಲ್ಲಿ ಎ’ ಬಣದ ಐದು ಪಂದ್ಯಗಳು ನಡೆಯಲಿವೆ. ಇದರಲ್ಲಿ ನಾಲ್ಕು ದೇಶಗಳಾದ ಭಾರತ, ಅಮೆರಿಕ, ಮೊರೊಕ್ಕೊ ಮತ್ತು ಬ್ರಝಿಲ್ ಪರಸ್ಪರ ಆಡಲಿದೆ. ಬಿ’ ಬಣದಲ್ಲಿ ನೈಜೀರಿಣ ಮತ್ತು ಚಿಲಿ ನಡುವಣ ಪಂದ್ಯವೂ ಇಲ್ಲಿ ನಡೆಯಲಿದೆ.
ಮಂಗಳವಾರ ಉದ್ಘಾಟನ ಸಮಾರಂಭ ನಡೆದ ಬಳಿಕ ಸ್ಪರ್ಧೆಗಳು ಆರಂಭವಾಗಲಿದೆ. ಮೊದಲ ದಿನ ಎರಡು ಪಂದ್ಯಗಳು ನಡೆಯಲಿವೆ. ಫುಟ್‌ಬಾಲ್ ಹಬ್ಬವನ್ನು ಪ್ರತಿಯೊಬ್ಬರೂ ವೀಕ್ಷಿಸುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನವಿ ಮಾಡಿದ್ದಾರೆ. ಫಿಫಾ ಅಂಡರ್ -17 ವನಿತಾ ವಿಶ್ವಕಪ್ ಆಯೋಜಿಸಲು ಅದ್ಭುತವಾದ ಕಳಿಂಗ ಕ್ರೀಡಾಂಗಣ ಸಿದ್ಧವಾಗಿದೆ.ಭಾರೀ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯ ವೀಕ್ಷಿಸುವಂತೆ ಪಟ್ನಾಯಕ್ ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ.
16 ತಂಡಗಳು
ಫಿಫಾ ಅಂಡರ್ -17 ವನಿತಾ ವಿಶ್ವಕಪ್ ಕೂಟದಲ್ಲಿ ವಿವಿಧ ದೇಶಗಳ 12 ತಂಡಗಳು ಭಾಗವಹಿಸುತ್ತಿವೆ. ಒಡಿಶಾ ಮಾತ್ರವಲ್ಲದೇ ನವೀ ಮುಂಬಯಿ ಮತ್ತು ಗೋವಾದಲ್ಲಿಯೂ ಪಂದ್ಯಗಳು ನಡೆಯಲಿವೆ. ಒಟ್ಟಾರೆ 32 ಪಂದ್ಯಗಳು ನಡೆಯಲಿದ್ದು ನವೀ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಫೈನಲ್ ಜರಗಲಿದೆ.