ದೋಹಾ: ಫಿಫಾ ವಿಶ್ವಕಪ್ ಶುರುವಾಗಿದೆ. ಒಂದರ ಹಿಂದೊಂದು ನಿಯಮಗಳೂ ಹೊರಬರುತ್ತಿವೆ. ಅದು ಮಾಡುವಂತಿಲ್ಲ, ಇದು ಮಾಡುವಂತಿಲ್ಲ, ಅದನ್ನೇ ಮಾಡಬೇಕು, ಇದನ್ನೇ ಮಾಡಬೇಕು ಎಂದು ಫಿಫಾ ನಿಯಮ ಮಾಡುವುದು ಸಹಜ, ಜೊತೆಗೆ ಅದು ಅದರ ಅಧಿಕಾರವೂ ಹೌದು. ಅಂತಹದ್ದೊಂದು ವಿಶೇಷ ಸುದ್ದಿಯೀಗ ಫಿಫಾ ಕಡೆಯಿಂದ ಹೊರಬಿದ್ದಿದೆ.
ಅದರ ಅನುಮತಿಯಿಲ್ಲದ ಹೊರತು ವಿಶ್ವಕಪ್‌ಗೆ ಸಂಬಂಧಿಸಿದ ಯಾರೂ ತಮ್ಮ ತೋಳಿನಲ್ಲಿ ಯಾವುದೇ ಬರಹವಿರುವ ತೋಳುಪಟ್ಟಿಯನ್ನು ಧರಿಸಿರಬಾರದು. ಹಾಗೇನಾದರೂ ಮಾಡಿದರೆ ಅಂತಹ ಆಟಗಾರನಿಗೆ ಯೆಲ್ಲೋ ಕಾರ್ಡ್ ನೀಡಿ ಪಂದ್ಯದಿಂದ ಹೊರಹಾಕಲಾಗುತ್ತದೆ!
ಇದನ್ನೂ ಓದಿ:ಹದಿನೇಳೆಂಟು: ಹದಿಹರೆಯದವರ ಸಮಸ್ಯೆಯ ಬಗ್ಗೆ ಸಮಾಜದ ಉಪೇಕ್ಷೆಯನ್ನು ಬಿಂಬಿಸುವ ಚಿತ್ರ
ಟೀ ಶರ್ಟ್ ಕಾಲರ್‌ನಲ್ಲಿ “ಲವ್’ ಎಂಬ ಬರೆಹವನ್ನು ಇಟ್ಟುಕೊಳ್ಳುವಂತಿಲ್ಲ. ಅದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಲ್ಜಿಯಂ ಆಟಗಾರರಿಗೆ ಫಿಫಾ ಅಧಿಕೃತವಾಗಿ ತಿಳಿಸಿದೆ. ಅದೇ ಸಂದೇಶ ಇತರೆ ತಂಡಗಳಿಗೂ ಹೋಗಿದೆ.
ಇದಕ್ಕೆ ಕಾರಣ ತಮ್ಮ ಅಂಗಿಯ ಮೇಲೆ ಒನ್ ಲವ್ ಅಕ್ಷರಗಳನ್ನು ಧರಿಸುವ ಮೂಲಕ, ಹಲವು ಫುಟ್ ಬಾಲ್ ತಂಡಗಳು “ಒನ್ ಲವ್’ ಅಭಿಯಾನವನ್ನು ಬೆಂಬಲಿಸಲು ನಿರ್ಧರಿಸಿದ್ದು. ತಾರತಮ್ಯವನ್ನು ವಿರೋಧಿಸಲು ನೆದರ್ಲೆಂಡ್ ಫುಟ್‌ಬಾಲ್ ಸಂಸ್ಥೆ ಒನ್ ಲವ್ ಅಭಿಯಾನ ಆರಂಭಿಸಿದೆ. ಇದು ಬೇರೆಬೇರೆ ರೂಪ ಪಡೆಯಬಾರದು ಎನ್ನುವುದು ಫಿಫಾ ಕಳಕಳಿ.